ಸಿಂಧು ಆಕ್ರಮಣಕಾರಿ ಆಟಕ್ಕೆ ನೆಲ ಕಚ್ಚಿದ ಜಪಾನ್ ನ ಅಕಾನೆ : ಸೆಮಿ ಫೈನಲ್ ಪ್ರವೇಶಿಸಿ ಭಾರತೀಯ ಹೆಮ್ಮೆಯ ಪುತ್ರಿ

0
🌐 Belgaum News :

ಟೋಕಿಯೋ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಆಕ್ರಮಣಕಾರಿ ಆಟಕ್ಕೆ ಜಪಾನ್ ನ ಅಕಾನೆ ಯಮಾಗುಚಿ ಅವರು ಸೋಲು ಕಂಡಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.  ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ.ಸಿಂಧು ಅವರು ಜಪಾನ್ ನ ಅಕಾನೆ ಯಮಾಗುಚಿ ಅವರನ್ನು ಸೋಲಿಸಿದರು. ತವರು ನಾಡಿನ ಆಟಗಾರ್ತಿಯನ್ನು 21-13, 22-20 ಅಂತರದ ನೇರ ಸೆಟ್ ಗಳಿಂದ ಸೋಲಿಸಿದ ಭಾರತದ ಭರವಸೆಯ ಆಟಗಾರ್ತಿ ಸೆಮಿ ಫೈನಲ್ ಗೆ ಪ್ರವೇಶ ಗಿಟ್ಟಿಸಿದರು.

ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಸಿಂಧು ಮೊದಲ ಸೆಟ್ ನ್ನು ಸುಲಭದಲ್ಲಿ ಜಯಿಸಿದರು. ಎರಡನೇ ಸೆಟ್ ನಲ್ಲಿ ಅಕಾನೆ ಯಮಾಗುಚಿ ಭಾರೀ ಸ್ಪರ್ಧೆ ಒಡ್ಡಿದರು. ರೋಮಾಂಚನಕಾರಿಯಾಗಿ ನಡೆದ ಎರಡನೇ ಸೆಟ್ ನ್ನು ಕೂಡಾ ವಶಪಡಿಸಿಕೊಂಡ ಸಿಂಧು ಗೆಲುವಿನ ನಗೆ ಬೀರಿದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');