ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರು ಆರೋಗ್ಯದ ಕಾಳಜಿ ವಹಿಸಿ

0
🌐 Belgaum News :
ಬೆಳಗಾವಿ: ಅಥಣಿ: ಮಹಾಮಳೆಗೆ ಕೃಷ್ಣಾ ನದಿಯ ಅಬ್ಬರ ಹೆಚ್ಚಾಗಿದ್ದು ನಾಲ್ಕು ಲಕ್ಷ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿರುವದರಿಂದ ಅಥಣಿ ತಾಲೂಕಿನ 22 ಗ್ರಾಮಗಳು ಜಲಾವೃತವಾದ ಬೆನ್ನಲ್ಲೆ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರು ಮನೆಗಳನ್ನು ತೊರೆಯುವ ಪರಿಸ್ಥಿತಿ ಎದುರಾಗಿದ್ದು ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಆದರೆ ಕೊರೊನಾ ಮೂರನೆಯ ಅಲೆ ಹರಡುವ ಸಾಧ್ಯತೆ ಇರುವದರಿಂದ ಸಾರ್ವಜನಿಕರು ಕೊರೊನಾ ಸೊಂಕು ತಗುಲಿದ ಮೇಲೆ ಚಿಕಿತ್ಸೆಗಾಗಿ ಸಮಸ್ಯೆ ಎದುರಿಸುವುದಕ್ಕಿಂತ ಕೊವಿಡ್ ಸೊಂಕು ತಗುಲದ ಹಾಗೆ ಮುಂಜಾಗ್ರತೆ ವಹಿಸುವುದು ತುಂಬಾ ಅಗತ್ಯವಾಗಿದೆ ಅದಕ್ಕಾಗಿ ಕೋವಿಡ್ ಲಸಿಕೆಯನ್ನು ಪಡೆಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಕೋವಿಡ್ ಹರಡದಂತೆ ತಡೆಯಬಹುದಾಗಿದೆ ಎಂದು ಅಥಣಿ ತಾಲೂಕು ಆರೋಗ್ಯಾಧಿಕಾರಿ ಡಾ. ಬಸಗೌಡಾ ಕಾಗೆ ಹೇಳಿದರು.
ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದ ಝಿರೋ ಪಾಯಿಂಟ್ ಕಾಳಜಿ ಕೇಂದ್ರದಲ್ಲಿ ಜನವಾಡ,ಮಹೀಷವಾಡಗಿ, ನಂದೇಶ್ವರ ಮತ್ತು ಸತ್ತಿ ಗ್ರಾಮದ ಸಂತ್ರಸ್ತರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಮಲೇರಿಯಾ ನಿರ್ಮೂಲನೆ ಮತ್ತು ಕೋವಿಡ್ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಜನರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಜ್ವರ ,ನೆಗಡಿ ಕೆಮ್ಮು ಬಂದರೆ ನಿರ್ಲಕ್ಷ್ಯ ಮಾಡದೆ ಸರಕಾರಿ ಆಸ್ಪತ್ರೆಗೆ ಬಂದು ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೆಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ ಅನೂಪ್ ಗಸ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ, ಹಿರಿಯ ಮುಖಂಡ  ರಮೇಶಗೌಡ ಪಾಟೀಲ, ಅವಿನಾಶ ನಾಯಿಕ, ಮಲ್ಲಪ್ಪ ಹಂಚಿನಾಳ, ಸಿ. ಎಸ್. ಗೌಡವಾಡಿ, ಹಿರಿಯ ಆರೋಗ್ಯ ಅಧಿಕಾರಿ ಸುರೇಶ ವಾಲಿಕಾರ, ಬಿ. ಎ. ಕಕಮರಿ, ಎಂ. ಎಚ್. ವಾಲಿಕಾರ,  ಪಿ. ಎಸ್. ಜಂಬಗಿ, ಪಿ. ಡಿ. ಒ. ಎಸ್. ಎಸ್. ಪೋತದಾರ, ಡಿ. ಎಸ್. ಅನಂತಪುರ, ಬಿ.ಎಸ್. ನೆಮಗೌಡ ಹಾಗೂ ಇತರರು ಉಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');