ಬಿಸಿ ಊಟದ ಪ್ರಭಾರ ಅಧಿಕಾರಿಯಾಗಿ ಕೆ ಟಿ ಕಾಂಬಳೆ ಪದಗ್ರಹಣ

0
🌐 Belgaum News :
ಬೆಳಗಾವಿ :ಅಥಣಿ: ಮತ್ತು ಕಾಗವಾಡ ತಾಲೂಕಿನ ಶಾಲಾ ವಿದ್ಯಾರ್ಥಿಗಳ ಬಿಸಿ ಊಟದ ಯೋಜನಾ ಪ್ರಭಾರ ಆಗಿ ಕೆ. ಟಿ ಕಾಂಬಳೆ ಅಧಿಕಾರ ವಹಿಸಿಕೊಂಡರು. ಈ ವೇಳೆ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕೆ. ಟಿ ಕಾಂಬಳೆ ಅವರನ್ನು ಗೌರವಿಸಿ ಸನ್ಮಾನಿಸುವ ಮೂಲಕ ಸ್ವಾಗತಿಸಲಾಯಿತು
ಈ ವೇಳೆ ಮಾತನಾಡಿದ ಎಸ.ಎಮ್ ರಾಠೋಡ ಅಧಿಕಾರ ವಹಿಸಿಕೊಂಡ ಕೆ. ಟಿ ಕಾಂಬಳೆ ಅವರು ಪದಗ್ರಹಣ ಖುಷಿ ತಂದಿದೆ. ತಾಲೂಕಿನ ಎಲ್ಲ ಬಿ ಆರ್ ಸಿ ಮತ್ತು ಸಿ ಆರ್ ಪಿ ಗಳು ಮತ್ತು ಶಾಲೆಗಳ ಮುಖ್ಯೊಪಾಧ್ಯಾಯರು ಸೇರಿದಂತೆ ಶಿಕ್ಷಕ ವರ್ಗದಿಂದ ಸಂಪೂರ್ಣ ಸಹಕಾರ ಕೊಡಲಿದ್ದೇವೆ. ಈ ಮೊದಲು ಅವರ ಪರಿಚಯ ಇರುವದರಿಂದ ಮತ್ತು ಅವರ ಕಾರ್ಯ ವೈಖರಿಯನ್ನು ನೋಡಿರುವದರಿಂದ ನಮಗೆ ಅವರ ಕೆಲಸದ ಬಗ್ಗೆ ಹಾಗೂ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವ ಬಗ್ಗೆ ವಿಶ್ವಾಸವಿದೆ ಎಂದರು.
ಈ ವೇಳೆ ಸನ್ಮಾನ ಸ್ವಿಕರಿಸಿ ಮಾತನಾಡಿದ ಬಿಸಿ ಊಟ ಯೋಜನೆಯ ಪ್ರಭಾರ ಅಧಿಕಾರಿ ಕೆ. ಟಿ ಕಾಂಬಳೆ ಮಾತನಾಡಿ ಬಿಸಿ ಊಟದ ಯೊಜನೆ ಸರ್ಕಾರದ ಅತ್ಯುನ್ನತ ಯೊಜನೆಗಳಲ್ಲಿ ಒಂದಾಗಿದೆ. ಶಾಲಾ ಮಕ್ಕಳ ಹಾಜರಾತಿ ಹೆಚ್ಚಬೆಕಾದರೆ ಮತ್ತು ಶಿಕ್ಷಕರು ಗುಣಮಟ್ಟದ ಶಿಕ್ಷಣ ಒದಗಿಸಿದಾಗ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಶಕ್ತಿರಾಗಬೇಕಾದರೆ ಸರ್ಕಾರದ ಯೋಜನೆಯನ್ನು ಮಕ್ಕಳಿಗೆ ಸರಿಯಾಗಿ ತಲುಪಿಸುವ ಕೆಲಸವಾಗಬೇಕು.ಅಥಣಿ ತಾಲೂಕಿನ ಎಲ್ಲ ಶಿಕ್ಷಕರಲ್ಲಿ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಯಲ್ಲಿ ಕಳಕಳಿಯ ಮನವಿ ಮಾಡುತ್ತೇನೆ ಯಾವುದೇ ಕೆಲಸ ಆಗಬೇಕಾದಲ್ಲಿ ಮುಜಗುರಪಡದೆ ತಮ್ಮನ್ನು ಸಂಪರ್ಕಿಸಿದರೆ ಸೂಕ್ತವಾಗಿ ಸ್ಪಂದಿಸಲಿದ್ದೇನೆ ಎಂದರು.
ಈ ವೇಳೆ ಜೆ ಬಿ ದರೂರ, ಎಸ್. ಕೆ ಹೊಳೆಪ್ಪನವರ, ಎ. ಬಿ ಕುಟಕೊಳಿ, ಎಸ್. ಎ ವಾಲಿ, ಎಸ್. ಪಿ ಬಡಿಗೇರ, ಎ. ಎ ಮೇಲಿನಕೇರಿ, ಪಿ. ಎಸ್ ಚಲವಾದಿ, ಸಿ.ಎಮ್ ಕಾಂಬಳೆ, ಕೆ. ಪಿ ಗೆಜ್ಜಿ, ಸುನೀಲ ಸಣದಿ, ಕೈಲಾಸ ಮದಬಾಂವಿ ಮತ್ತು ಎ. ಆರ್ ಸವದಿ, ಟಿ. ಎನ್ ಐಹೊಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೈಲಾಸ ಮಧಬಾವಿ ನಿರೂಪಿಸಿದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');