ಪ್ರವಾಹ ಪೀಡಿತರ ಕಾಳಜಿ ಕೇಂದ್ರಕ್ಕೆ ಮಾಜಿ ಶಾಸಕ ಡೊಂಗರಗಾಂವ ಭೇಟಿ

0
🌐 Belgaum News :
ಬೆಳಗಾವಿ:  (ಅಥಣಿ: )ಕೃಷ್ಣಾ ನದಿ ಪ್ರವಾಹದಿಂದ ಭಾಧಿತವಾದ ಪಿ ಕೆ ನಾಗನೂರ,ಸತ್ತಿ,ಸವದಿ ಮತ್ತು ಜನವಾಡ ಗ್ರಾಮಗಳ ನೆರೆ ಸಂತ್ರಸ್ತರು ವಾಸವಾಗಿರುವ ಕಾಳಜಿ ಕೇಂದ್ರಗಳಿಗೆ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಭೇಟಿ ನೀಡಿ ನೆರೆ ಸಂತ್ರಸ್ತರ ಸಂಕಷ್ಟ ಆಲಿಸಿದರು.ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ವರ್ಷ ಪ್ರವಾಹ ಬಂದ ಸಮಯದಲ್ಲಿ ವಿಜಾಪುರ ಜಿಲ್ಲೆಯ ಜನರಿಗೆ ಸಂಪೂರ್ಣ ಪರಿಹಾರ ಕೊಡಲಾಗಿದ್ದು ಒಂದೆ ರಾಜ್ಯದ ಎರಡು ಜಿಲ್ಲೆಗಳಲ್ಲಿ ಭಿನ್ನವಾಗಿ ಕಾಣುತ್ತಿರುವದು ಏಕೆ ಎಂದು ಸಂತ್ರಸ್ತರು ನಮ್ಮನ್ನು ಕೇಳುತ್ತಿದ್ದಾರೆ.
 ಹಿಪ್ಪರಗಿ ಯೋಜನೆಯು ಉನ್ನತೀಕರಿಸಿದ ಯೊಜನೆ ಅಡಿಯಲ್ಲಿ ಬರುತ್ತದೆ ಆದರೆ ಹಿಪ್ಪರಗಿ ಯೋಜನೆಯ ಕೆಲಸಕ್ಕೆ ಬರುವ ಅನುದಾನಕ್ಕೂ ವ್ಯತ್ಯಾಸ ಉಂಟಾಗುತ್ತಿದ್ದು ಹಿಪ್ಪರಗಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಗಳಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಹೇಳಿದ್ದಾರೆ.ಆದರೆ ಪರಿಹಾರ ಕೊಡುವ ಕೆಲಸವು ಯುದ್ದೋಪಾದಿಯಲ್ಲಿ ಆಗಬೇಕಾದ ಅಗತ್ಯವಿದೆ.
 ಪ್ರತಿ ವರ್ಷ ಪ್ರವಾಹ ಬಂದಾಗ ಜನರು ಅತಂತ್ರವಾಗುತ್ತಿದ್ದಾರೆ. ಆದ್ದರಿಂದ ಕೂಡಲೆ ಹಿಪ್ಪರಗಿ ಬ್ಯಾರೇಜ್ ಅನ್ನು ಕೃಷ್ಣಾ ನದಿಯ ಉನ್ನತೀಕರಿಸಿದ ಯೊಜನೆಯಲ್ಲಿ ತೆಗೆದುಕೊಳ್ಳಬೇಕು ಎಂದು ಸರಕಾರವನ್ನು ಆಗ್ರಹಿಸುತ್ತೇನೆ. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಇದರಿಂದಾಗಿ ನದಿ ತೀರದ ಜಮೀನುಗಳಿಗೆ ನೀರು ನುಗ್ಗಿದ್ದು ಸರ್ಕಾರ
ಬೆಳೆಹಾನಿ ಜೊತೆಗೆ ರೈತರ ಸಾಲಮನ್ನಾ ಮಾಡುವದರ ಜೊತೆಗೆ ಪರಿಹಾರ ಕೊಡಬೇಕು.
ಕಾಳಜಿ ಕೇಂದ್ರಗಳಲ್ಲಿ ರುಚಿ ಮತ್ತು ಶುಚಿಯಾದ ವ್ಯವಸ್ಥೆ ಮಾಡಬೇಕು.ಮತ್ತು ಶಾಶ್ವತ ಸ್ಥಳಾಂತರಕ್ಕಾಗಿ ಹಕ್ಕು ಪತ್ರಗಳ ವಿತರಣೆ ಬಾಕಿ ಉಳಿದಿದ್ದು ಕಾಳಜಿ ಕೇಂದ್ರದಿಂದ ಮರಳಿ ಅವರು ತಮ್ಮ ಗ್ರಾಮಗಳಿಗೆ ತೆರಳುವ ಮುನ್ನ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು ಮತ್ತು ಕೃಷ್ಣಾ ನದಿಯ ಪ್ರವಾಹದಿಂದ ನೊಂದ ಸಂತ್ರಸ್ತರಿಗೆ ಪರಿಹಾರದ ಎಲ್ಲ ಕಾರ್ಯಗಳನ್ನು ತ್ವರಿತವಾಗಿ ಮಾಡಬೇಕೆಂದು ಎಂದು ಮಾಜಿ ಶಾಸಕ ಶಹಾಜಹಾನ್ ಡೋಂಗರಾಗಾಂವ್ ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಹಾದೇವ ಧರಿಗೌಡರ, ಮಹಾಂತೇಶ ಬಾಡಗಿ, ಮಂಜು ಹೋಳಿಕಟ್ಟಿ, ಶಿವಾನಂದ ಸೌದಾಗರ, ಯಾಸಿನ್ ಝಾರೆ, ಜಬ್ಬಾರ್ ಚಿಂಚಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Attachments area
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');