ಕಾಳಜಿ ಕೇಂದ್ರಗಳಲ್ಲಿ ಕಾಳಜಿ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ

0
🌐 Belgaum News :
ಅಥಣಿ: ಕೋವಿಡ್ ಮೂರನೆಯ ಅಲೆಯ ಭಯ ಕಾಡುತ್ತಿರುವ ನಡುವೆ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಸತ್ತಿ,ಸವದಿ,ರಡ್ಡೇರಟ್ಟಿ, ಝೀರೋ ಪಾಯಿಂಟ್ ಸೇರಿದಂತೆ ಹಲವು ಕಡೆ ಸಾವಿರಾರು ಸಂಖ್ಯೆಯಲ್ಲಿ ನೆರೆ ಸಂತ್ರಸ್ತರು ಬೀಡು ಬಿಟ್ಟಿದ್ದು ತಾತ್ಕಾಲಿಕ ಶೆಡ್ ಗಳಲ್ಲಿ ವಾಸವಾಗಿರುವ ಸಂತ್ರಸ್ತರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದು ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಯನ್ನು ತಾಲೂಕು ಆಡಳಿತ ಮಾಡಿದ್ದು ಸದ್ಯ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ಕಡೆ ಕೋವಿಡ್ ಲಸಿಕೆಯನ್ನು ಕೂಡ ನೀಡಲಾಗಿದೆ.
ಇನ್ನು ಹಲವು ಕಾಳಜಿ ಕೇಂದ್ರಗಳಲ್ಲಿ ವಯೋವೃದ್ದರು, ಮಕ್ಕಳು, ಪುಟ್ಟ ಕಂದಮ್ಮಗಳು ಮತ್ತು ಬಾಣಂತಿಯರ ವ್ಯವಸ್ಥೆಗಾಗಿ ಆಶಾ ಮತ್ತು ಅಂಗನವಾಡಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ನೇಮಕ ಮಾಡಲಾಗಿದೆ.ಬಿ.ಪಿ,ಶುಗರ, ಮತ್ತು ಸಣ್ಣಪುಟ್ಟ ಕಾಯಿಲೆಗಳಿಗೆ ಉಚಿತವಾಗಿ ಮಾತ್ರೆ ಮತ್ತು ಔಷಧಿಗಳನ್ನು ವಿತರಿಸಲಾಗುತ್ತಿದೆ.ಅಗತ್ಯ ಬಿದ್ದ ಕಡೆ ತುರ್ತು ಸಮಯದಲ್ಲಿ ಬಳಕೆ ಮಾಡಲು ಅಂಬುಲೆನ್ಸ ಗಳನ್ನು ಕೂಡ ಕಾಯ್ದಿರಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಬಸಗೌಡ ಕಾಗೆ ತಿಳಿಸಿದ್ದಾರೆ.
ತಾಲೂಕಿನ 22 ಗ್ರಾಮಗಳು ಪ್ರವಾಹ ಪೀಡಿತವಾಗಿದ್ದು 32 ಕಡೆ ಕಾಳಜಿ ಕೇಂದ್ರ ತೆರೆಯಲಾಗಿದ್ದು ಎಲ್ಲ ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ನೆರೆ ಸಂತ್ರಸ್ತರ ಆರೋಗ್ಯದ ದೃಷ್ಟಿಯಿಂದ ಕೆಲಸ ನೀರ್ವಹಿಸುತ್ತಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚೀವ ಲಕ್ಷ್ಮಣ ಸವದಿ ಅವರು ತಾಲೂಕಿನ ಜನರ ಜೀವ ರಕ್ಷಣೆಗಾಗಿ ಕೊರೊನಾ ಎರಡನೆಯ ಅಲೆಯ ಸಂಕಷ್ಟದ ಸಮಯದಲ್ಲಿ ಅಥಣಿ ತಾಲೂಕು ಆಸ್ಪತ್ರೆಗೆ ಕೊಟ್ಟ ಬಸ್ ಅಂಬುಲೆನ್ಸ ಸಂಚಾರಿ ಆಸ್ಪತ್ರೆಯನ್ನು ಸದ್ಯ ಕಾಳಜಿ ಕೇಂದ್ರಗಳಲ್ಲಿ ನೆರೆ ಸಂತ್ರಸ್ತರ ಕೋವಿಡ್ ಟೆಸ್ಟ ಮತ್ತು ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಇದರಿಂದಾಗಿ ಸಾಕಷ್ಟು ಜನ ನೆರೆ ಸಂತ್ರಸ್ಥರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ತುಂಬಾ ಅನುಕೂಲವಾಗಿದೆ. ಇದಕ್ಕಾಗಿ ತಾಲೂಕಿನ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ.

“ದಿಲೀಪ ಲೋಣಾರೆ ಮಾಜಿ ಪುರಸಭೆ ಅಧ್ಯಕ್ಷ”

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');