ಭೀಮಾತೀರದ ಹಂತಕ ಚಡಚಣ ಕೇಸ್ ಗೆ ರೋಚಕ ತಿರುವು..!

0
🌐 Belgaum News :

ವಿಜಯಪುರ : ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ್ ಚಡಚಣ ಹಾಗೂ ಸಹೋದರ ಗಂಗಾಧರ ಚಡಚಣ ಹತ್ಯೆಯ ಕೇಸ್ ಗೆ ರೋಚಕ ತಿರುವು ಸಿಕ್ಕಿದೆ.

 

ಜಿಲ್ಲೆಯ ಚಡಚಣ ಹತ್ತಿರದ ಕೊಂಕಣಗಾಂವ್ ನಲ್ಲಿ ನಡೆದ ಚಡಚಣ ಎನ್ಕೌಂಟರ್ ಕೇಸ್ ನಲ್ಲಿ ಮತ್ತೊಂದು ಟ್ವಿಸ್ಟ್ ಬಹಿರಂಗ ಕೊಂಡಿದ್ದು, ಇಂಡಿ ಜೆಎಂಎಫ್ ಸಿ ಕೋರ್ಟ್ ನಿಂದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಿಆರ್ ಪಿಸಿ 209 ಅಡಿಯಲ್ಲಿ ಇಂಡಿ ಜೆಎಂಎಫ್ ಸಿ ನ್ಯಾಯಾಧೀಶರಾದ ಅಲ್ತಾಫ್ ಖಂಡಾವಿ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ.

ಈಗಾಗಲೇ ಚಡಚಣ ಹತ್ಯೆಯ ಎರಡು ಪ್ರಕರಣದಲ್ಲಿ ಒಟ್ಟು 17 ಆರೋಪಿಗಳ ವಿರುದ್ಧ ಚಡಚಣ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ್ ಮುಂದಿನ ದಿನಗಳಲ್ಲಿ ಚಡಚಣ ಸಹೋದರರ ಹತ್ಯೆ ಕೇಸ್ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಸರ್ಕಾರಿ ವಕೀಲರಾದ ಐ ಕೆ ಗಚ್ಚಿನಮಹಲ್ ಮಾಹಿತಿ ನೀಡಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');