ಮುಳ್ಳುಕಂಟಿಯಲ್ಲಿ ಹೆಣ್ಣು ಶಿಶು ವಿಜಯಪುರದಲ್ಲಿ ಅಮಾನವೀಯ ಘಟನ

0
🌐 Belgaum News :

ವಿಜಯಪುರ: ರಸ್ತೆ ಬದಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಬಳಿ ಜರುಗಿದೆ.

ಮಗು ಅಳುವ ಧ್ವನಿ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ರಸ್ತೆ ಬದಿಯ ಮುಳ್ಳುಕಂಟಿಯಲ್ಲಿ ಎಸೆಯಲಾಗಿದ್ದ ಹೆಣ್ಣುಶಿಶುವನ್ನು ರಕ್ಷಿಸಿದ್ದಾರೆ.

ಹೆಣ್ಣು ಶಿಶು ಎಂಬ ಕಾರಣಕ್ಕೆ, ಇಲ್ಲವೇ ವಿವಾಹ ಪೂರ್ವ ಜನನದ ಕಾರಣ ತಾಯಿ ಹಾಗೂ ಕುಟುಂಬದವರು ಶಿಶುವನ್ನು ಮುಳ್ಳು ಕಂಟಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಶಿಶುವನ್ನು ರಕ್ಷಿಸಿರುವ ದೇವರಹಿಪ್ಪರಗಿ ಪೊಲೀಸರು ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');