ಅಲ್ಪಸಂಖ್ಯಾತರ ಸಮಾಜದವರಿಗೆ ಇಲ್ಲಿಯವರೆಗೆ ಯಾವೊಬ್ಬ ಸಚಿವರು ಮಾಡದೇ ಇರುವಂತಹ ಹೆಚ್ಚಿನ ಅನುದಾನ ಬಿಡುಗಡೆ : ಕೋ-ಆಫ್ ಕ್ರೆಡಿಟ್ ಬ್ಯಾಂಕಿನ ನಿರ್ದೇಶಕರಾದ ಭರತೇಶ ಪಾಟೀಲ

0
🌐 Belgaum News :

ಶೇಡಬಾಳ :- ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಮಾಜದವರಿಗೆ ಇಲ್ಲಿಯವರೆಗೆ ಯಾವೊಬ್ಬ ಸಚಿವರು ಮಾಡದೇ ಇರುವಂತಹ ಹೆಚ್ಚಿನ ಅನುದಾನ ಬಿಡುಗಡೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಶ್ರೀಮಂತ ಪಾಟೀಲರು ಮಾಡಿದ್ದಾರೆಂದು ಶೇಡಬಾಳ ಅರ್ಬನ್ ಕೋ-ಆಫ್ ಕ್ರೆಡಿಟ್ ಬ್ಯಾಂಕಿನ ನಿರ್ದೇಶಕರಾದ ಭರತೇಶ ಪಾಟೀಲ ಹೇಳಿದರು.

ಅವರು ಶನಿವಾರ ದಿ. 31 ರಂದು ಶೇಡಬಾಳ ಪಟ್ಟಣದ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಸಚಿವ ಶ್ರೀಮಂತ ಪಾಟೀಲರ ವಿಶೇಷ ಪ್ರಯತ್ನದಿಂದ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನೀಡಲಾಗಿರುವ ಶುದ್ಧ ಕುಡಿಯುವ ನೀರಿನ ಪೀಲ್ಟರ್ ಆಶ್ರಮಕ್ಕೆ ಹಸ್ತಾಂತರಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿನ ಅಲ್ಪಸಂಖ್ಯಾತರಿಗಾಗಿ 52 ಶುದ್ಧ ಕುಡಿಯುವ ನೀರಿನ ಪೀಲ್ಟರ್‍ಗಳನ್ನು ವಿತರಿಸಿದ್ದಾರೆ.

ಆ ಪೈಕಿ ಶೇಡಬಾಳದ ಶ್ರೀ ಶಾಂತಿಸಾಗರ ಆಶ್ರಮಕ್ಕೆ ಒಂದು ಪೀಲ್ಟರ್, ಮಸೀದಿಗೆ ಒಂದು ಪೀಲ್ಟರ್ ಹಾಗೂ ಕಲ್ಲಾಳದಲ್ಲಿರುವ ಜೈನ ಬಸದಿಗೆ ಒಂದು ಪೀಲ್ಟರ್ ನೀಡಿದ್ದಾರೆ. ಅದರಂತೆ ಈ ಭಾಗದ ಜೈನ ಮಂದಿರಗಳಿಗೆ, ಮಸೀದಿಗಳನ್ನು ಅಭಿವೃದ್ಧಿಗೊಳಿಸುವಗೋಸ್ಕರ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿರುವದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಇಷ್ಟೋಂದು ಅನುದಾನ ಬಿಡುಗಡೆಗೊಂಡಿರುವುದು ಇದೇ ಪ್ರಥಮವಾಗಿದೆ. ಇದರ ಶ್ರೇಯಸ್ಸೇಲ್ಲಾ ಸಚಿವ ಶ್ರೀಮಂತ ಪಾಟೀಲರಿಗೆ ಸಲ್ಲುತ್ತದೆಂದು ಭರತೇಶ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಶ್ರೀ ಶಾಂತಿಸಾಗರ ಆಶ್ರಮದ ಸಂಚಾಲಕರಾದ ರಾಜು ನಾಂದ್ರೆ, ಭರತೇಶ ಪಾಟೀಲ, ನೇಮಿನಾಥ ಪಾಟೀಲ, ಭರತೇಶ ನಾಂದ್ರೆ, ಪ್ರಕಾಶ ಯಂದಗೌಡರ, ಪ್ರಕಾಶ ಚೌಗಲಾ, ಮಹಾವೀರ ನಾಂದ್ರೆ, ಕಿರಣ ಯಂದಗೌಡರ, ಉತ್ಕರ್ಷ ಪಾಟೀಲ, ಅಣ್ಣಾ ಅರವಾಡೆ, ಶಾಂತಿನಾಥ ಮಾಲಗಾಂವೆ, ಜಯಕರ ಮಗದುಮ, ರಾವಸಾಬ ಪಾಟೀಲ, ಮಹಾವೀರ ನಾಂದ್ರೆ, ರಾಜು ಸವದತ್ತಿ, ರಾಜು ಕುಸನಾಳೆ, ಬಾಹುಬಲಿ ನಾಂದ್ರೆ, ಸಚಿವರ ಆಪ್ತ ಸಹಾಯಕ ಸಚೀನ ದೇಸಾಯಿ ಸೇರಿದಂತೆ ಅನೇಕರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');