ಜನಪ್ರತಿನಿಧಿಗಳಿಗೆ ನೋವು ತೋಡಿಕೊಂಡ ರೈತನ ವಿರುದ್ಧ ಕೇಸ್

0
🌐 Belgaum News :

ಯಾದಗಿರಿ: ಜನಪ್ರತಿನಿಧಿಗಳಿಗೆ ತಮ್ಮ ನೋವನ್ನ ತೋಡಿಕೊಂಡು ಪ್ರಶ್ನೆ ಮಾಡಿದ ರೈತನ ವಿರುದ್ಧ ಎಫ್​ಐಆರ್​ ದಾಖಲಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ರೈತ ಬಸಪ್ಪ ಭಂಗಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ಶಂಕರ್ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ ಕೊಳ್ಳರು ಸೇತುವೆ ಮುಳುಗಿದ ಹಿನ್ನಲೆಯಲ್ಲಿ ಪರಿಶೀಲನೆಗೆ ಬಂದಿದ್ದರು. ಈ ವೇಳೆ ಬಸಪ್ಪ ಭಂಗಿ ಜನಪ್ರತಿನಿಧಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಘಟನೆ ಬಳಿಕ ಅವಾಚ್ಯ ಶಬ್ದಗಳಿಂದ ಮಾಜಿ ಸಚಿವ ಆರ್.ಶಂಕರ್​ಗೆ ನಿಂದನೆ ಮಾಡಲಾಗಿದೆ ಎಂದು ಬಸಪ್ಪ ವಿರುದ್ಧ ಶಹಾಪುರ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');