ಮಠಾಧೀಶರ ಬಗ್ಗೆ ಮಾತನಾಡುವಾಗ ಮೈಮೇಲೆ ಪ್ರಜ್ಞೆ ಇರಲಿ ಯತ್ನಾಳಗೆ ಎಚ್ಚರಿಕೆ ಕೊಟ್ಟ ಹಾಲಸ್ವಾಮೀಜಿ

0
🌐 Belgaum News :

ವಿಜಯನಗರ: ಸಮಾಜಕ್ಕೆ ಒಳಿತನ್ನು ಬಯಸುವವರು ಸ್ವಾಮೀಗಳು, ಮಠಾಧೀಶರ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ. ಮೊದಲಿಗೆ ನೀವು ಮಠಗಳಿಗೆ ಬರುವುದನ್ನು ಬಿಡಿ ಎಂದು ಶಾಸಕ ಬಸವರಾಜ ಯತ್ನಾಳಗೆ ಹಾಲಸ್ವಾಮೀಜಿಗಳು  ಎಚ್ಚರಿಕೆ ನೀಡಿದ್ದಾರೆ.

ಬಿ.ಎಸ್​. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅವರಿಗೆ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಮಠಾಧೀಶರನ್ನು ಟೀಕಿಸಿದ್ದಕ್ಕೆ ಯತ್ನಾಳ್ ವಿರುದ್ಧ ವಿಜಯನಗರ ಜಿಲ್ಲೆಯ ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಹಾಲಸ್ವಾಮೀಜಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಧರ್ಮ ಬೆಳೆಸುವವರು ನಾವು, ಅಳಿಸುವ ಗುಣ ನಮ್ಮಲಿಲ್ಲ. ಕಾಲಕಾಲಕ್ಕೆ ಎಲ್ಲವೂ ತಿಳಿಯುತ್ತದೆ.  ಮಠಾಧೀಶರ ಬಗ್ಗೆ ಮಾತನಾಡುವಾಗ ಮೈಮೇಲೆ ಪ್ರಜ್ಞೆ ಇರಲಿ ಎಂದು ತಿಳುವಳಿಕೆ ಹೇಳಿದ್ದಾರೆ.

ಗಡ್ಡ ಬಿಟ್ರೆ ಶಿವಾಜಿ, ಗಡ್ಡ ತೆಗೆದ್ರೆ ಬಸವಣ್ಣ ಅಂತೀರಿ. ಹಿಂದೆ ಮಸೀದಿಗೆ ನೀವು ಹೋದಾಗ ಔರಂಗಜೇಬ್ ಆಗಿದ್ರಾ? ನೀವು ಈಗಲೇ ಬದಲಾದರೆ ಸರಿ. ಇಲ್ಲವಾದರೆ ರಾಜ್ಯಾದ್ಯಂತ ನಾವು ನಿಮ್ಮ ಬಗ್ಗೆ ಜನರಿಗೆ ಏನು ಸಂದೇಶ ಕೊಡಬೇಕೋ ಅದನ್ನು ಕೊಡುತ್ತೇವೆ ಎಂದು ಹಾಲಸ್ವಾಮೀಜಿ ಹೇಳಿದರು.

ಪ್ರಮುಖವಾಗಿ ದಿಂಗಾಲೇಶ್ವರಶ್ರೀ ಅವರಿಗೆ ಮಾಡಿದ ಅವಹೇಳನವನ್ನು ಉಲ್ಲೇಖಿಸಿ ಮಾತಾಡಿರುವ ಹಾಲಸ್ವಾಮೀಜಿ, ಇದು ಯತ್ನಾಳ್ ಅವರು ಸಮಸ್ತ ಸ್ವಾಮೀಜಿಗಳಿಗೆ ಮಾಡಿರುವ ಅಪಮಾನ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.////

 

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');