ಮಾಧ್ಯಮ ರತ್ನ ಪ್ರಶಸ್ತಿಗೆ ಭಾವನಾ ನಾಗಯ್ಯಾ ಆಯ್ಕೆ

0
🌐 Belgaum News :

ಮುದ್ದೇಬಿಹಾಳ : ಪ್ರತಿ ವರ್ಷದಂತೆ ಪ್ರಸಕ್ತ  2020- 21 ಸಾಲಿನ  ಕರ್ನಾಟಕ ಜರ್ನಲಿಷ್ಟ್ ಯೂನಿಯನ್ (ರಿ) ಬೆಂಗಳೂರ ವಿಜಯಪುರ ಹಾಗೂ ಮುದ್ದೇಬಿಹಾಳ ತಾಲೂಕಾ ಘಟಕದ ವತಿಯಿಂದ ಕೊಡಮಾಡುವ” ಮಾಧ್ಯಮ ರತ್ನ” ಪ್ರಶಸ್ತಿಗೆ ಖಾಸಗಿ ವಾಹಿನಿಯ ನಿರೂಪಕಿ, ಪತ್ರಕರ್ತೆ ಹಾಗೂ ಸುದ್ದಿ ವಾಚಕಿ, ಭಾವನಾ ನಾಗಯ್ಯಾ ಅವರು ಭಾಜಿನರಾಗಿದ್ದಾರೆ.

ರಾಜ್ಯದ ಪ್ರಮುಖ ಮಾಧ್ಯಮಗಳ ಲೋಕದಲ್ಲಿ ಕ್ರಾಂತಿ ಮಾಡಿದ ಸ್ನೇಹ ಜೀವಿ ಉತ್ತರ ಕರ್ನಾಟಕದ ಯುವ ಹೋರಾಟಗಾರ, ದಿ ಡಾ. ನಾಗರಾಜ ಬ ಜಮಖಂಡಿ ಸ್ಮರಣಾರ್ಥ ಜಮಖಂಡಿ ಪರಿವಾರ ಸಮಾಜ ಸೇವಾ ಪ್ರತಿಷ್ಠಾನ(ರಿ), ಮುದ್ದೇಬಿಹಾಳ ಹಾಗೂ ಡಾ.ನಾಗರಾಜ ಜಮಖಂಡಿ ಮೆಮೋರಿಯಲ್ ಟ್ರಸ್ಟ್(ರಿ), ಬೆಂಗಳೂರು ರವರು ಸಂಯುಕ್ತಾಶ್ರಯದಲ್ಲಿ  ವಿಜಯಪುರ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ಸಾಧಕರೊಬ್ಬರಿಗೆ  ಕೊಡಮಾಡುವ “ಮಾಧ್ಯಮ ಸಾಧಕ” ಪ್ರಶಸ್ತಿ”ಗೆ ವಿಜಯ ಕರ್ನಾಟಕ ದಿನಪತ್ರಿಕೆಯ ವಿಜಯಪುರ ಆವೃತ್ತಿಯ ಜಿಲ್ಲಾ ಹಿರಿಯ ವರದಿಗಾರ ಸಂಗಮೇಶ ಚೂರಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಗೊಂಡಿದ್ದಾರೆ.  ಪ್ರಶಸ್ತಿ ಜೊತೆಗೆ 11 ಸಾವಿರ  ನಗದು ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿರುತ್ತದೆ.

ಈ ಪ್ರಶಸ್ತಿಯನ್ನು ಅಗಷ್ಟ 7 ಶನಿವಾರದಂದು ರಂದು ಮುಂಜಾನೆ 11 ಘಂಟೆಗೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ), ಮುದ್ದೇಬಿಹಾಳ ತಾಲೂಕು ಹಾಗೂ ವಿಜಯಪುರ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಇಲ್ಲಿನ ಮಹಾಂತೇಶ ನಗರ ಬಡಾವಣೆಯ ಶ್ರೀ ಗುರು ರಾಘವೇಂದ್ರ ಮಂಗಲ ಭವನದಲ್ಲಿ ಹಮ್ಮಿಕೊಂಡಿರುವ  ಜಿಲ್ಲಾ ಪಟ್ಟದ ಪತ್ರಿಕಾ ದಿನಾಚರಣೆಯ ಹಾಗೂ ಸಾಧಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕøತರಿಗೆ  ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು  ದಿ, ಡಾ.ನಾಗರಾಜ ಬ ಜಮಖಂಡಿ ಸ್ಮರಣಾರ್ಥ ಜಮಖಂಡಿ ಪರಿವಾರ ಸಮಾಜ ಸೇವಾ ಪ್ರತಿಷ್ಠಾನ(ರಿ),ಸಂಚಾಲಕ ಅರವಿಂದ ಜಮಖಂಡಿ  ಹಾಗೂ ಕರ್ನಾಟಕ ಜರ್ನಲಿಷ್ಟ ಯೂನಿಯನ್ ರಾಜ್ಯಾಧ್ಯಕ್ಷ ಬಿ ನಾರಾಯಣ, ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');