ಪ್ರವಾಹ ನೆರೆಸಂತ್ರಸ್ಥರನ್ನ ಆತ್ಮೀಯವಾಗಿ ಬಿಳ್ಕೊಟ್ಟ ದಾದಾರಿ ಫೌಂಡೇಶನ್

0
🌐 Belgaum News :

 

ಕಾಗವಾಡ:ಮಹಾಪೂರದಿಂದ ಹಲವು ಗ್ರಾ‌ಮಗಳು ಜಲಾವೃತವಾಗಿ ಜನ ಸಂತ್ರಸ್ಥರಾಗಿದ್ದವರನ್ನ ಕಾಗವಾಡದ ದಾದರಿ ಫೌಂಡೇಶನ್ ನವರು ಊಟ ಉಪಚಾರ ಮಾಡಿ ಅವರಿಗೆ ನೆರವನ್ನು ನೀಡಿದ್ದರು ಪ್ರವಾಹ ತಗ್ಗಿದ್ದರಿಂದ ನೆರೆಸಂತ್ರಸ್ತರು ತಮ್ಮ ತಮ್ಮ ಗ್ರಾಮಗಳಿಗೆ ಹೋಗಲು ನಿಶ್ಚಯಿಸಿದ್ದರಿಂದ ಇವತ್ತು ದಾದಾರಿ ಫೌಂಡೇಶನ್ ವತಿಯಿಂದ ಆತ್ಮೀಯವಾಗಿ ಬಿಳ್ಕೋಟ್ಟರು

ಕಾಗವಾಡದ ದಾದಾರಿ ಫೌಂಡೇಶನ್ ತೆರೆದ ಕಾಳಜಿ ಕೇಂದ್ರದಲ್ಲಿ ಕರ್ನಾಟಕದ-ಮಹಾರಾಷ್ಟದ ಸುಮಾರು ಒಂದ ನೂರಾ ಐವತ್ತು ಕುಟುಂಬಗಳು ಆಸರೆ ಪಡೆದಿದ್ದವು ಆ ಎಲ್ಲ ಕುಟುಂಗಳಿಗೆ ತಲಾ ಒಂದು ಹಾಸಿಗೆ,ಹೊದಿಕೆ,ಎಂಟು ಕೆಜಿ ರವೆ,ಎಂಟು ಕೆಜಿ ಸಕ್ಕರೆ ನೀಡಲಾಯಿತು

ಇದೆ ವೇಳೆ ಮಾತನಾಡಿದ ದಾದಾರಿ ಫೌಂಡೇಶನ್ ಅಧ್ಯಕ್ಷ ರಾಜುಗೌಡ ಪಾಟೀಲ್,ಮಹಾಪೂರ ಬಂದ ಹಿನ್ನೆಲೆಯಲ್ಲಿ ಕಾಗವಾಡದ ಬಾಬಾಣ್ಣಗೌಡ ಪ್ರಾಥಮಿಕ ಶಾಲೆಯಲ್ಲಿ ದಾದಾರಿ ಫೌಂಡೇಶನ್ ವತಿಯಿಂದ ಸತತ ಏಳು ದಿನಗಳ ಕಾಲ ನೆರೆಸಂತ್ರಸ್ತರಿಗೆ ಸೂರನ್ನ ಕಲ್ಪಿಸಲಾಗಿತ್ತು ಈಗ ನೆರೆಸಂತ್ರಸ್ತರು ತಮ್ಮ ಇಚ್ಚೆ ಮೇರೆಗೆ ಪ್ರವಾಹ ತಗ್ಗಿದ್ದರಿಂದ ತಮ್ಮ ಗ್ರಾಮಗಳಿಗೆ ಹೋಗುತ್ತಿರುವದರಿಂದ ಅವರನ್ನು ಬಿಳ್ಕೊಡಲಾಗುತ್ತಿದೆ ಮತ್ತು ಯಾರೂ ಇಲ್ಲೇ ಇರುವದಾಗಿ ಅಪೇಕ್ಷಿದರೇ ಅವರಿಗೇ ಎಲ್ಲ ಸಹಾಯ ಸೌಕರ್ಯ ಮಾಡಲಾಗುವದು ಎಂದರು

ಈ ವೇಳೆ ಜ್ಯೋತಿಗೌಡ ಪಾಟೀಲ್,ಕಾಕಾಸಾಬ ಪಾಟೀಲ್,ಚೇತನ ಪಾಟೀಲ್,ಸಿದ್ದು ಒಡೆಯರ,ಗುಂಡು ನ್ಯಾಮಗೌಡರ,ಶಿವರಾಜ ಪಾಟೀಲ್, ಪ್ರವೀಣ ಪಾಟೀಲ್, ಪ್ರಕಾಶ ಪಾಟೀಲ್, ರಮೇಶ ಚೌಗಲಾ,ಪ್ರಕಾಶ ದೊಂಡಾರೆ,ತಾತ್ಯಾಭಂಡ ಜೋಶಿ,ಡಾ.ಅನೀಲ ಪಾಟೀಲ್, ಅಸ್ಲಂ ಜಮಾದಾರ,ಜನಾರ್ಧನ ದೊಂಡಾರೆ,ಅಕ್ಷಯ ಪಾಟೀಲ್,ವಿಠ್ಠಲ ಪವಾರ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');