ದಾದರಿ ಫೌಂಡೇಶನ್ ಮಾನವೀಯ ಕಾರ್ಯಕ್ಕೆ ಜನರ ಮೆಚ್ಚುಗೆ

0
🌐 Belgaum News :

 

ಕಾಗವಾಡ:ಕೃಷ್ಣಾ ನದಿಗೆ ಮಹಾಪೂರ ಬಂದು ನದಿ ತೀರದ ಗ್ರಾಮಗಳಲ್ಲಿ ನೀರು ನುಗ್ಗಿ ಆರು ದಿನ ಕಳೆದಿವೆ ತಾಲೂಕಿನ ನಿರಾಶ್ರಿತರನ್ನು ಕಾಗವಾಡ ತಾಲೂಕಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಇನ್ನು ಜನರಿಗಾಗಿ ದಾದಾ ಫೌಂಡೇಶನ್ ನವರು ಕಾಳಜಿ ಕೇಂದ್ರ ತೆರೆದು ಜನರಿಗೆ ಊಟ ಉಪಚಾರದ ವ್ಯವಸ್ಥೆ ಮಾಡಿದ್ದಾರೆ ಇದನ್ನೂ ಹೊರತುಪಡಿಸಿ ಪ್ರವಾಹದಿಂದಾಗಿ ಕಾಗವಾಡ ಪಟ್ಟಣದಲ್ಲಿ ನೀರಿನ ಅಭಾವ ತಲೆದೋರಿತ್ತು ಇದನ್ನು ಮನಗಂಡು ಅವರು ಕಾಗವಾಡ ಪಟ್ಟಣಕ್ಕೆ ನೀರನ್ನು ಟ್ಯಾಂಕರ್ ಮೂಲಕ ದಿನಾಲೂ ಹದಿನೈದು ಸಾರಿಗೆ ಮಾಡಿ ಜನರಿಗೆ ನೀರು ಪೂರೈಸುತ್ತಿದ್ದಾರೆ

ಇದೆ ವೇಳೆ ಮಾತನಾಡಿದ ದಾದರಿ ಫೌಂಡೇಶನ್ ದ ಜ್ಯೋತಿಕುಮಾರ ಪಾಟೀಲ್ ಮಾತನಾಡಿ,ಜನರ ಕಷ್ಟಗಳಿಗೆ ಸ್ಪಂದಿಸುವದು ನಮ್ಮ ಫೌಂಡೇಶನ್ ದ ಮೂಲ ಉದ್ದೇಶವಾಗಿದ್ದು,ಈಗ ನೆರೆಸಂತ್ರಸ್ತರಿಗಾಗಿ ನಾವು ಕಾಳಜಿ ಕೇಂದ್ರ ತೆರೆದು ಅವರನ್ನ ಕಾಳಜಿ ಮಾಡಲಾಗುತ್ತಿದೆ ಇಷ್ಟೇ ಅಲ್ಲದೆ ಕಾಗವಾಡ ತಾಲೂಕಿನಲ್ಲಿ ಯಾವದೇ ಸಮಸ್ಯೆಗಳನ್ನು ಬಗೆಹರಿಸಲು ಸದಾ ಸಿದ್ದವಿರುವದಾಗಿ ಹೇಳಿದರು ಇದರ ಜೊತೆಗೆ ಸತತ ಮೂರುದಿನದಿಂದ ಪಟ್ಟಣದ ವಾರ್ಡಗಳಿಗೆ ಉಚಿತವಾಗಿ ನೀರು ಪೂರೈಸುತ್ತಿರುವದಾಗಿ ಹೇಳಿದರು

ಇದೆ ವೇಳೆ ಬಸವನಗರದ ವೃದ್ದೆಯೊಬ್ಬರು ಮಾತನಾಡಿ,ನಮ್ಮ ಊರಿನ ಗಣ್ಯರಾದ ಸಿದಗೌಡ ಪಾಟೀಲ್ ಅವರು ಯಾವತ್ತೂ ಬಡವರಪರ ಕಾರ್ಯ ಮಾಡುತ್ತಾ ಬಂದಿದ್ದಾರೆ ಈಗ ಅವರದೇ ಆದ ದಾದಾರಿ ಫೌಂಡೇಶನ್ ನವರು ಇದನ್ನೆ ಮುಂದುವರೆಸಿಕೊಂಡು ಬರುತ್ತಿದ್ದಾರೆ ಇಂತಹ ಮಹಾನುಭಾವರು ಇರೋದ್ರಿಂದ ನಮ್ಮಂಥವರು ಬದುಕಲು ಸಾಧ್ಯವಾಗಿದೆ ಅವರ ಕಾರ್ಯ ನಡುವೆ ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಹೇಳಿದರು

ಇದೆ ವೇಳೆ ದಾದಾರಿ ಫೌಂಡೇಶನ್ ಅಧ್ಯಕ್ಷ ರಾಜುಗೌಡ ಪಾಟೀಲ್, ಸದಸ್ಯರಾದ ಕಾಕಾಸಾಬ ಪಾಟೀಲ್, ಚೇತನ ಪಾಟೀಲ್, ಜ್ಯೋತಿಗೌಡ ಪಾಟೀಲ್, ಸಿದ್ದು ಒಡೆಯರ್,ಗುಂಡು ನ್ಯಾಮಗೌಡರ,ಶಿವರಾಜ್ ಪಾಟೀಲ್, ಜನಾರ್ದನ ದೊಂಡಾರೆ,ಪ್ರವೀಣ ದೊಂಡಾರೆ ಇದ್ದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');