ಕುಮಠಳ್ಳಿ ಬೆಂಬಲಿಗರಿಂದ ಸಚೀವ ಸ್ಥಾನಕ್ಕೆ ಆಗ್ರಹ

0
🌐 Belgaum News :
ಅಥಣಿ: ಹಳೆಯ ವಿಡಿಯೋ ಇಟ್ಟುಕೊಂಡು  ಕೆಲವು ಮಾಧ್ಯಮಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ, ಮಾದ್ಯಮಗಳು ಸತ್ಯಾಸತ್ಯತೆ ಅರಿತು ನಡೆದುಕೊಳ್ಳಬೇಕು ಎಂದು ಪಂಚಮಸಾಲಿ ಸಂಸ್ಥಾಪಕ ಅದ್ಯಕ್ಷ ಮುಖಂಡ ರಮೇಶಗೌಡ ಪಾಟೀಲ ಅವರು ಹೇಳಿದರು.ಅಥಣಿ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಾನೂ ಸಹ ಪ್ರವಾಹ ಬಂದಂತಹ ಸಂದರ್ಭದಲ್ಲಿ ಕುಮಠಳ್ಳಿ ಅವರ ಜೊತೆ ಎರಡು ದಿನ ತಿರುಗಾಡಿದ್ದೇನೆ.
ಸಂತ್ರಸ್ತರಿಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸಲು ಶಾಸಕರು ಸೂಕ್ತ ಕ್ರಮ ಕೈಗೊಂಡು ಅನಂತರ ಬೆಂಗಳೂರಿಗೆ ಹೊರಟು ಹೋದರು.‌ ಅನಂತರದಲ್ಲಿ ಯಾರೋ ಒಬ್ಬರ ತಪ್ಪು ಕಲ್ಪನೆಯಿಂದ ಹಳೆಯ ಯಾವುದೋ ಒಂದು ವಿಡಿಯೋ ಇಟ್ಟುಕೊಂಡು ದೊಡ್ಡ ರಾದ್ದಾಂತ ಮಾಡುತ್ತಿದ್ದಾರೆ ಆ ಘಟನೆ ಘಟಿಸಿಯೇ ಇಲ್ಲ ಎಂದು ಹೇಳಿದರು.
ಅಥಣಿ ಶಾಸಕ ಮಹೇಶ ಕುಮಠಳ್ಳಿ ಕಲಿತವರಿದ್ದಾರೆ ಜನರಿಗೆ ಸ್ಪಂದಿಸುತ್ತಾರೆ, ಪ್ರವಾಹ ಸಂತ್ರಸ್ತರ ಜೊತೆ ನಿಕಟ ಸಂಪರ್ಕದಲ್ಲಿದ್ದು ಎಲ್ಲ ಸಮಸ್ಯೆ ನಿವಾರಿಸುತ್ತಿದ್ದಾರೆ. 2019 ರ ಯಡಿಯೂರಪ್ಪ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಬೇಕಾದರೆ ಕುಮಠಳ್ಳಿ ಅವರ ಪಾತ್ರ ಬಲುದೊಡ್ಡದು.
ಯಡಿಯೂರಪ್ಪನವರು ಉಪಚುಣಾವಣೆ ಸಂದರ್ಭದಲ್ಲಿ ಕೊಟ್ಟ ಮಾತು ತಪ್ಪಿದಕ್ಕೆ ಅಥಣಿ ಶಿವಯೋಗಿಗಳ ಅವಕೃಪೆಗೆ ಪಾತ್ರರಾದರು. ಇನ್ನೂ ಕಾಲ ಮಿಂಚಿಲ್ಲ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಮಠಳ್ಳಿ ಹಾಗೂ ರಮೇಶ ಜಾರಕಿಹೊಳಿ ಅವರಿಗೆ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನ ನೀಡಬೇಕು. ಏಕೆಂದರೆ ಅಥಣಿ ಭಾಗದಲ್ಲಿ ಇನ್ನೂ ಅನೇಕ ನೀರಾವರಿ, ಪ್ರವಾಹ ಸಂತ್ರಸ್ತರಿಗೆ ಸಂಬಂಧಿಸಿದ ಬಾಕಿ ಇರುವ ಶಾಶ್ವತ ಕೆಲಸಗಳನ್ನು ಇವರು ಮಾಡುತ್ತಾರೆಂದು ಹೇಳಿದರು.
ಈ ವೇಳೆ ಅವಿನಾಶ ನಾಯಕ, ಮುತ್ತಣ್ಣ ಸಂತಿ,‌ ವಿನಯಗೌಡ ಪಾಟೀಲ, ಶ್ರೀಶೈಲ ಸಂಕ, ಸುನೀಲಗೌಡ ಪಾಟೀಲ, ಬಸವರಾಜ ಢಂಗಿ, ರಾಜು ಕುಮಠಳ್ಳಿ, ಮಲ್ಲಿಕಾರ್ಜುನ ಅಂದಾನಿ, ಗುರು ಆಂಜುರ, ಸತ್ಯಾಪ್ಪ ಪೂಜಾರಿ, ಮಲ್ಲಪ್ಪ ಹಂಚಿನಾಳ, ಅಲಗೌಡ ಪಾಟೀಲ, ಶಿವಗೌಡ ನೇಮಗೌಡ, ದುಂಡಪ್ಪ ಕಲಗುಣಿ, ಹರ್ಷಾ ಮಗದುಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');