ಪಂಚಮಸಾಲಿ ಸ‌ಮಾಜಕ್ಕೆ ೨ಎ ಮೀಸಲಾತಿ ನೀಡದಿದ್ದರೆ ಮತ್ತೆ ಹೋರಾಟ : ಬಸವ ಜಯಮೃತ್ಯುಜಯ ಸ್ವಾಮೀಜಿ

0
🌐 Belgaum News :
ಅಥಣಿ: ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ನೆರೆ ಪೀಡಿತ ಗ್ರಾಮಗಳ ಸಂತ್ರಸ್ತರ ಪರಿಸ್ಥಿತಿ ಶೋಚನೀಯ ವಾಗಿದೆ, ಉತ್ತರ ಕರ್ನಾಟಕ ಭಾಗದವರೇ ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದು ಈ ಭಾಗದ ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವಂತೆ ಸಿಎಂ ಅವರಿಗೆ ಆಗ್ರಹಿಸಲಾಗವುದು ಎಂದು ಬಸವ ಜಯಮೃತ್ಯುಂಜಯ ಸ್ವಾಮಿಜಿ ಹೇಳಿದರು.ಅಥಣಿ ತಾಲೂಕಿನ ಪ್ರವಾಹ ಪರಿಸ್ಥಿತಿ ಅವಲೋಕಿಸಿ ಸತ್ತಿ,ಸವದಿ,ಜನವಾಡ ಗ್ರಾಮಗಳ ಜನರೊಂದಿಗೆ ಸಮಾಲೋಚನೆ ನಡೆಸಿ ಅಥಣಿ ಪಟ್ಟಣದ ಮುಖಂಡ ಧರೆಪ್ಪ ಠಕ್ಕಣ್ಣವರ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಮಾಜಿ ಸಿಎಂ ಯಡಿಯೂರಪ್ಪ ನವರು ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವದಾಗಿ ಭರವಸೆ ನೀಡಿದ್ದರು, ಸದ್ಯ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಸಿಎಂ ಬದಲಾವಣೆ ಆಗಿದೆ, ಸರ್ಕಾರ ಮಾತು ಕೊಟ್ಟಂತೆ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಯನ್ನು ಪ್ರಸ್ತುತ ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಬೇಕು, ಸೆಪ್ಟೆಂಬರ್ ೩೦ರ ಒಳಗಾಗಿ ಮೀಸಲಾತಿ ಘೋಷಿಸದೆ ಇದ್ದಲ್ಲಿ ಅಕ್ಟೋಬರ್ ೧ ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹೊರಾಟವನ್ನು ಮುಂದುವರೆಸಲಾಗಿವುದು.
ಎಂದರು.ಪ್ರಸಕ್ತ ರಾಜಕಾರಣದ ಬಗ್ಗೆ ಮಾತನಾಡಿದ ಅವರು ಕೇಂದ್ರ ಬಿಜೆಪಿ ವರಿಷ್ಠರು ಪಂಚಮಸಾಲಿ ಜನಾಂಗಕ್ಕೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಕಲ್ಪಿಸಿ ಕೊಡುತ್ತಾರೆಂದು ನಾಡಿನ ಸಮಾಜ ಬಾಂಧವರು ನಂಬಿದ್ದರು. ಆದರೆ ಕಾಣದ ಕೈಗಳ ಒತ್ತಡದಿಂದ ಕೈತಪ್ಪಿ ಸಮಾಜಕ್ಕೆ ಅಗೌರವ ಆಗಿದೆಯೆಂದು ಸಮಾಜ ಭಾಂದವರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಿ ಜನಸಂಖ್ಯೆ ಅನುಗುಣವಾಗಿ ಸಮಾಜಕ್ಕೆ ಉನ್ನತ ಅವಕಾಶವನ್ನು ಬಿಜೆಪಿ ವರಿಷ್ಠರು ಕಲ್ಪಿಸಿ ಕೊಡುತ್ತಾರೆಂದು ನಾವು ನಂಬಿದ್ದೇವೆ ಎಂದರು.
ಈ ವೇಳೆ ಪಂಚಮಸಾಲಿ ಸಮಾಜದ ಮುಖಂಡರಾದ ಧರೆಪ್ಪ ಠಕ್ಕಣ್ಣವರ, ಲಕ್ಕಣ್ಣ ಮುಡಸಿ, ನಿಶಾಂತ ದಳವಾಯಿ, ಸದಾಶಿವ ಕೆಂಗಲಗುತ್ತಿ, ಮುತ್ತಣ್ಣ ಸಂತಿ, ಸಂತೋಷ ಘಾಳಿ, ಬಸವರಾಜ ಸವದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');