ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಪ್ರತಿಯೊಬ್ಬರಿಗೆ ಆರ್‍ಟಿಪಿಸಿಆರ್ ದಾಖಲೆ ಕಡ್ಡಾಯವಾಗಿದೆ.

0
🌐 Belgaum News :

ಶೇಡಬಾಳ : ಕೊರೋನಾ 3 ನೇ ಅಲೆ ಮಹಾರಾಷ್ಟ್ರದಲ್ಲಿ ಪ್ರಾರಂಭಗೊಂಡಿದ್ದು, ಕರ್ನಾಟಕ ರಾಜ್ಯದಲ್ಲಿ ಮತ್ತೇ ಕೊರೋನಾ ಹರಡಬಾರದು, ಈ ಕಾರಣ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದಿದ್ದು, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಪ್ರತಿಯೊಬ್ಬರಿಗೆ ಆರ್‍ಟಿಪಿಸಿಆರ್ ದಾಖಲೆ ಕಡ್ಡಾಯವಾಗಿದೆ. ಅದನ್ನು ತೆಗೆದುಕೊಂಡು ಬಂದವರೆಗೆ ಮಾತ್ರ ರಾಜ್ಯದಲ್ಲಿ ಪ್ರವೇಶ ನೀಡಲಾಗುವುದೆಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ಅವರು ರವಿವಾರ ದಿ. 1 ರಂದು ಕಾಗವಾಡದ ಕೋವಿಡ್ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿನ ಅಧಿಕಾರಿಗಳೊಂದಿಗೆ ರಾಜ್ಯ ಸರ್ಕಾರದ ಆದೇಶದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಕೊರೋನಾ 1 ನೇ ಅಲೆ ಮತ್ತು 2 ನೇ ಅಲೆಯ ಪರಿಣಾಮ ರಾಜ್ಯದ ಜನತೆ ಅನುಭವಿಸಿದೆ. 3ನೇ ಅಲೆ ರಾಜ್ಯಕ್ಕೆ ಪ್ರವೇಶಿಸವಾಗಬಾರದು. ಈ ಕಾರಣ ಸರ್ಕಾರ ರಾಜ್ಯದಲ್ಲಿ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ತಪಾಸಣೆ ಕೇಂದ್ರಗಳನ್ನು ಪ್ರಾರಂಭಿಸಿ ಕಟ್ಟು ನಿಟ್ಟಿನ ಆದೇಶ ಪಾಲನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರು ಸಿಬ್ಬಂದಿಗಳೊಂದಿಗೆ ಯಾವುದೇ ಅನಾವಶ್ಯಕವಾಗಿ ವಾದ ವಿವಾದ ಮಾಡದೇ ಪ್ರತಿಯೊಬ್ಬರು ಆರ್‍ಟಿಪಿಸಿಆರ್ ದಾಖಲೆ ತೆಗೆದುಕೊಂಡು ಬರಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದಿಂದ ಕಾಗವಾಡ ಮಾರ್ಗವಾಗಿ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ತಪಾಸಣೆ ಕೇಂದ್ರಗಳು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಈಗಾಗಲೇ ನಿಪ್ಪಾಣಿ ಹತ್ತಿರದ ಕೊಗೊನಳ್ಳಿ ಚೆಕ್ ಪೋಸ್ಟ್‍ಗೆ ಭೇಟಿ ನೀಡಿ ಅಲ್ಲಿ ತಪಾಸಣೆ ಕೇಂದ್ರಗಳಲ್ಲಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಿ ಕಟ್ಟು ನಿಟ್ಟಿನ ಕ್ರಮ ಜರುಗಿಸುವ ಆದೇಶ ನೀಡಿದ್ದೇನೆಂದು ಹೇಳಿದರು.

ಜಿಲ್ಲಾ ಪೋಲಿಸ್ ಪ್ರಮುಖರಾದ ಲಕ್ಷ್ಮಣ ನಿಂಬರಗಿ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹಾರಾಷ್ಟ್ರದಿಂದ ಬರುವ ಎಲ್ಲ ಬಸ್‍ಗಳಲ್ಲಿನ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆ ಕೈಗೊಳ್ಳುವಂತೆ ಸೂಚನೆ ನೀಡಿದ ಅವರು ದಾಖಲೆ ಇದ್ದವರನ್ನು ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಿ, ದಾಖಲೆ ಇಲ್ಲದೇ ಇರುವವರನ್ನು ಮರಳಿ ಮಹಾರಾಷ್ಟ್ರಕ್ಕೆ ಕಳುಹಿಸಿಕೊಡುವಂತೆ ಹೇಳಿದರು.

ಈ ಸಮಯದಲ್ಲಿ ಕಾಗವಾಡ ತಹಶೀಲ್ದಾರ ಪರಿಮಳಾ ದೇಶಪಾಂಡೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಈರನಗೌಡ ಏಗನಗೌಡರ, ಆರೋಗ್ಯಾಧಿಕಾರಿ ಡಾ. ಬಸಗೌಡ ಕಾಗೆ, ಅಥಣಿ ಡಿವಾಯ್‍ಎಸ್‍ಪಿ ಎಸ್.ವ್ಹಿ.ಗೀರೀಶ, ಸಿಪಿಆಯ್ ಶಂಕರಗೌಡ ಬಸನಗೌಡರ, ಪಿಎಸ್‍ಐ ಜಾಕೀರ್ ಮೋಕಾಶಿ ಮತ್ತು ಆರೋಗ್ಯ ಸಿಬ್ಬಂದಿಯವರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');