ಪಿಯುಸಿಯಲ್ಲಿ ವಿದ್ಯಾಪೋಷಕ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

0
🌐 Belgaum News :

ಬೆಳಗಾವಿ: ವಿದ್ಯಾಪೋಷಕ ಸಂಸ್ಥೆ 2021-22 ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಅಭ್ಯಾಸ ಮಾಡುತ್ತಿರುವ ಬೆಳಗಾವಿ ಜಿಲ್ಲೆಯ ಅನೇಕ ವಿದ್ಯಾರ್ಥಿಗಳಿಗೆ ಧನಸಹಾಯ, ಪುಸ್ತಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಿ ತ್ತು. ಈ ವಿದ್ಯಾರ್ಥಿಗಳ ಪೈಕಿ ಪ್ರತಿಭಾನ್ವಿತ 12 ವಿದ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆ ಗೈದಿದ್ದಾರೆ.

ಈ ವಿದ್ಯಾರ್ಥಿಗಳು ಕೃಷಿಕಾರ್ಮಿಕರು, ಮನೆಗೆಲಸ,  ಕ್ಷೌರಿಕ, ಕಟ್ಟಡ ಕೆಲಸ ಮಾಡುವವರು, ಬಡಿಗತನ, ಕಮ್ಮಾರಿಕೆ, ಟೈಲರಿಂಗ್ ಮತ್ತಿತರ ಕೆಲಸಗಳಲ್ಲಿ ತೊಡಗಿರುವ ಕುಟುಂಬದಿಂದ ಬಂದಿದ್ದಾರೆ.

ಸಾಧಕ ವಿದ್ಯಾರ್ಥಿಗಳು:

ಲಕ್ಷ್ಮಿ ಲಟ್ಟೆ (ಶೇ.98), ಯಶೋಧರಾ ಮುಗಳಕೋಡ (ಶೇ.98), ಕ್ರಾಂತಿ ಇಂಗಳೆ (ಶೇ.97), ರಘು ಬೆಳಗಲಿ (ಶೇ.96.50), ನವಿಪಲ್ಲವಿ ಚೌಗಲೆ (ಶೇ.96), ಶ್ರೀನಿವಾಸ ಕುರಿ (ಶೇ.95), ದರ್ಶಿನಿ ಕಂಚಿ (ಶೇ.94), ಅಕ್ಷತಾ ಸನಧಿ (ಶೇ.94),  ಮನುಪ್ರಿಯಾ ಟಲ್ಲೂರ (ಶೇ.93.3), ಸಮಿಕ್ಷಾ ದೇಸಾಯಿ (ಶೇ.93.3), ನಿಂಗಪ್ಪಾ ಉಪ್ಪಾರ (ಶೇ.91), ಸಂತೋಷ ಕರಿಗಾರ (ಶೇ.90).

ಈ ವಿದ್ಯಾರ್ಥಿಗಳಿಗೆ ಸಂಸ್ಥೆ ಅಭಿನಂದನೆ ಸಲ್ಲಿಸಿದೆ. ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್: www.vidyaposhak.ngo  ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');