ಪ್ರಕಟಣೆ

0
🌐 Belgaum News :

ಕೊವಿಡ್ -19 ನಿಂದ ಪೆಷಕರನ್ನು ಕಳೆದುಕೊಂಡ ಮಕ್ಕಳಿಗೆ ಪಾಲನೆ, ಪೆÇೀಷಣೆ ಜೊತೆಗೆ ಆರ್ಥಿಕ ನೆರವು

ಬೆಳಗಾವಿ, ಅ. 02 : ಕೊವಿಡ್ -19 ಸಾಂಕ್ರಾಮಿಕದಿಂದ 2020 ಮಾರ್ಚ.11 ರ ನಂತರ ಪೆÇೀಷಕರು, ಉಳಿದ ಪೆÇೀಷಕರು,(Surviving Parent) ಕಾನೂನು ಬದ್ಧ/ದತ್ತು ಪೆÇೀಷಕರನ್ನು ಕಳೆದುಕೊಂಡಿರುವ 18 ವರ್ಷದೊಳಗಿನ ಮಕ್ಕಳಿಗೆ ಪಾಲನೆ ಮತ್ತು ರಕ್ಷಣೆ ಒಳಗೊಂಡಂತೆ ಆರೋಗ್ಯ ವಿಮೆ, ಶಿಕ್ಷಣ ಮತ್ತು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಲು ಅನುವಾಗುವಂತೆ ತಕ್ಷಣ ನೆರವು ನೀಡಲಾಗುವದು ಜೊತೆಗೆ ಪ್ರತಿ ಮಗುವಿಗೆ 23 ವರ್ಷ ತುಂಬಿದ ನಂತರ ತಲಾ ರೂ. 10 ಲಕ್ಷಗಳನ್ನು (ಹತ್ತು ಲಕ್ಷ ರೂ.ಗಳು) ನೀಡಲು Pಒ  ’ ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿದೆ.

ಭಾರತ ಸರ್ಕಾರದ ಕಾರ್ಯದರ್ಶಿ, ನವದೆಹಲಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಸದರಿ ಯೋಜನೆಯ ಅನುಷ್ಠಾನದ ಪ್ರಮುಖ ಜವಾಬ್ದಾರಿಯನ್ನು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು, ಜಿಲ್ಲೆಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಗುರುತಿಸಲಾದ ಮಕ್ಕಳ ಅರ್ಹತೆಯನ್ನು ಅಂತಿಮವಾಗಿ ನಿರ್ಧರಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸುವರ್ಣ ವಿಧಾನಸೌಧ ಬೆಳಗಾವಿ, ದೂರವಾಣಿ ಸಂ: 0831-2474111 ಅಥವಾ 9731610464 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಕಾಸ್ಟೋಮ್ ಜೆವೆಲರಿ ಉಚಿತ ತರಬೇತಿ

ಬೆಳಗಾವಿ, ಅ. 02 : ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‍ಸೆಟಿ) ಬೆಳಗಾವಿಯಲ್ಲಿ, ಬೆಳಗಾವಿ ಜಿಲ್ಲೆಯ ಗ್ರಾಮೀಣ ಮಹಿಳೆಯರಿಗಾಗಿ ಕಾಸ್ಟೋಮ ಜೆವೆಲರಿ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಿದ್ದಾರೆ.

ತರಬೇತಿಯನ್ನು ಅಗಷ್ಟ ಎರಡನೇ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು ಆಸಕ್ತ ಅಭ್ಯರ್ಥಿಗಳು 18 ರಿಂದ 40 ವರ್ಷದ ವಯೋಮಿತಿಯಲ್ಲಿರಬೇಕು, ತರಬೇತಿ ಪಡೆದ ನಂತರ ಸ್ವ ಉದ್ಯೋಗ ಕೈಗೊಳ್ಳಲು ಸಿದ್ಧರಿರಬೇಕು. ತರಬೇತಿಯು ಉಚಿತವಾಗಿದ್ದು ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ.

ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು, ಬಿಳಿ ಹಾಳೆಯ ಮೇಲೆ ಅಥವಾ ನಮ್ಮ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು, ವಿಳಾಸ, ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೊತೆ ಆಧಾರ ಕಾರ್ಡ ಮತ್ತು ರೇಶನ್ ಕಾರ್ಡ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ, ಅಗಸ್ಟ್ ಎರಡನೇ ವಾರದೊಳಗಾಗಿ, ಸಿಬಿಆರ್‍ಸೆಟಿ ಸಂಸ್ಥೆಗೆ ತಲುಪುವಂತೆ ಕಳಿಸಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‍ಸೆಟಿ) ಪ್ಲಾಟ ನಂ ಸಿಎ-03 (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಎರಿಯಾ, ಆಟೋ ನಗರ, ಬೆಳಗಾವಿ. ದೂರವಾಣಿ ಸಂಖ್ಯೆ 8296792166, 9845750043, 8660038694, 8867388906, 0831-2440644, ಇವರನ್ನು ಸಂಪರ್ಕಿಸಲು ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಶ್ರವಣದೋಷವುಳ್ಳ ಬಾಲಕಿಯರ ವಸತಿಯುತ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಳಗಾವಿ, ಅ. 02 : ಇಲ್ಲಿನ ಆಜಮ್ ನಗರದ ಬಳಿಯ ವಿದ್ಯಾನಗರದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶ್ರವಣದೋಷವುಳ್ಳ ವಿಶೇಷಚೇತನ ಬಾಲಕಿಯರ ವಸತಿಯುತ ಶಾಲೆಯಲ್ಲಿ 1 ರಿಂದ 10 ನೇ ತರಗತಿವರೆಗೆ ವ್ಯಾಸಂಗ ನೀಡುವ ಸಲುವಾಗಿ 2021-22 ನೇ ಸಾಲಿಗೆ ಹೊಸದಾಗಿ ಪ್ರವೇಶಗಳನ್ನು ಪ್ರಾರಂಭಿಸಲಾಗಿದೆ.

ಉಚಿತ ಊಟ ಹಾಗೂ ವಸತಿ ಮತ್ತು ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಶ್ರವಣದೋಷವುಳ್ಳ ಬಾಲಕಿಯರ ಪಾಲಕರು/ ಪೆÇೀಷಕರು ತಮ್ಮ ಮಕ್ಕಳಿಗೆ ಉಚಿತ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಾಲೆಗೆ ಖುದ್ದಾಗಿ ಭೇಟಿ ನೀಡಲು ಅಥವಾ ದೂರವಾಣಿ ಸಂಖ್ಯೆ: 0831-2472250 ಅಥವಾ ಮೊಬೈಲ್ ಸಂಖ್ಯೆ: 9449442212 ಇದನ್ನು ಸಂಪರ್ಕಿಸಬಹುದು ಎಂದು ಕಿವುಡ ಮಕ್ಕಳ ಸರ್ಕಾರಿ ಶಾಲೆಯ ಪ್ರಭಾರ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ವ್ಯಕ್ತಿ ನಾಪತ್ತೆ

ಬೆಳಗಾವಿ, ಅ. 02 : ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ರಾಹುಲ್ ಪರಶುರಾಮ್ ಗಣಗಿನೆ 25 ವರ್ಷ ಯುವಕನು ಜುಲೈ 5 ರಂದು ರಾತ್ರಿ 11ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿದ್ದು ಕಾಣೆಯಾಗಿದ್ದಾನೆ. ಈ ಕುರಿತು ಕಾಕತಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಹುಲ್ ಪರಶುರಾಮ್ ಗಣಗಿನೆ 25 ವರ್ಷ 5ಅಡಿ 2 ಇಂಚು ಎತ್ತರ ಇದ್ದು ಕಪ್ಪು ಮೈಬಣ್ಣ ಅಗಲ ವಾದ ಮುಖ, ಸಾಧಾರಣ ಉದ್ದ ಮೂಗನ್ನು , ಹೊಂದಿದ್ದು ಗೌಂಡಿ ಕೆಲಸವನ್ನು ಮಾಡುತ್ತಾನೆ ಹಿಂದಿ, ಮರಾಠಿ ಮಾತನಾಡುತ್ತಾನೆ, ಹಾಗೂ ಬಿಳಿ ಬಣ್ಣದ ಫುಲ್ ಶರ್ಟ್ ಹಾಗೂ ಕಪ್ಪು ಬಣ್ಣದ ಫುಲ್ ಪ್ಯಾಂಟನ್ನು ದರಸಿದ್ದಾನೆ. ಎಡ ಕೈ ದೊಡ್ಡ ಬೆರಳು ಮಡಚಿರುತ್ತೆ.

ಈ ಚಹರೆಯ ವ್ಯಕ್ತಿ ಕಂಡು ಬಂದಲ್ಲಿ ಕಾಕತಿ ಪೆÇಲೀಸ್ ಠಾಣೆಗೆ ಸಂಪರ್ಕಿಸಿ ಎಂದು ಕಾಕತಿ ಪೆÇಲೀಸ್ ಠಾಣೆಯ ಆರಕ್ಷಕ ಉಪನಿರ್ದೇಶಕರು ಪ್ರಟಣೆಯಲ್ಲಿ ತಿಳಿಸಿದ್ದಾರೆ.////

ವಿದ್ಯುತ್ ವ್ಯತ್ಯಯ

ಬೆಳಗಾವಿ, ಅ. 02 : 110 ಕೆ.ವ್ಹಿ. ಮಚ್ಛೆ ಉಪಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಆ.03 ರಂದು ಬೆಳಿಗ್ಗೆ 07.00 ಗÀಂಟೆಯಿಂದ ಬೆಳಿಗ್ಗೆ 10.00 ಗÀಂಟೆಯವರೆಗೆ ವಿದ್ಯುತ್
ವ್ಯತ್ಯಯವಾಗಲಿದೆ.

ಬೆಳಗಾವಿ ತಾಲೂಕಿನ ಬಳಗಾಮಟ್ಟಿ, ಕುಟ್ಟಲವಾಡಿ, ಬಾಮನವಾಡಿ, ನಾವಗೆ, ಜಾನೇವಾಡಿ, ಬಾದರವಾಡಿ, ರಣಕುಂಡೆ, ಕರ್ಲೇ, ಕಿನಯೇ, ಸಂತಿ ಬಸ್ತವಾಡ, ಕಾಳೇನಟ್ಟಿ, ವಾಘವಾಡೆ, ರಂಗಧೋಳಿ, ಮಾರ್ಕಂಡೇಯ ನಗರ, ವಾಲ್ಮೀಕಿ ನಗರ, ವಾಘವಾಡೆ, ನಾವಗೆ ಹಾಗೂ ಮಚ್ಚೆ ಔದ್ಯೋಗಿಕ ಕ್ಷೇತ್ರಗಳಿಗೆ ಹಾಗೂ ಖಾನಾಪೂರ ತಾಲೂಕಿನ ಉಚವಡಾ, ಕುಸಮಳಿ, ಬೈಲೂರ, ಮೊರಬ, ಜಾಂಬೋಟಿ, ಓಲಮನಿ, ವಡಗಾಂವ, ದಾರೋಳಿ, ಚಾಪೋಲಿ, ಕಾಪೋಲಿ, ಮುಡವಿ, ಹಬ್ಬಾನಟ್ಟಿ, ದೇವಾಚಿಹಟ್ಟಿ, ತೋರಾಳಿ, ಗೋಲ್ಯಾಳಿ, ಬೆಟಗೇರಿ, ತಳೇವಾಡಿ, ಅಮಟೆ, ಕಾಲಮನಿ, ಚಿಕಲೆ, ಕಣಕುಂಬಿ, ಗವಸೆ, ಅಮಗಾಂವ, ಬೇಟ್ನೆ, ಪಾರವಾಡ, ಚಿಗುಳೆ, ಮಾನ, ಸಡಾ, ಚೋರ್ಲಾ, ಹಳೆ ಹಾಗೂ ಹೊಸ ಹುಳಂದ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಕಾ ಮತ್ತು ಪಾ ಗ್ರಾಮೀಣ ವಿಭಾಗ, ಹುವಿಸಕಂನಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');