ಅನೈತಿಕ ಸಂಬಂಧ: ಮನೆ ಬಿಟ್ಟು ಹೋಗಿ ನೇಣಿಗೆ ಶರಣಾದ ಪ್ರೇಮಿಗಳು

0
🌐 Belgaum News :

ಅಥಣಿ:  ಪ್ರಿಯಕರನ್ನು ನಂಬಿ ಪತಿ, ಮೂವರು ಮಕ್ಕಳನ್ನು ಬಿಟ್ಟು ಹೋದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಸೋಮವಾರ ಬಬಲೆಶ್ವರ್ ತಾಲೂಕಿನಲ್ಲಿ ನಡೆದಿದೆ.

ಅಥಣಿ ತಾಲೂಕಿನ ಬಡಚಿ ಗ್ರಾಮದ ಯುವಕ ಸುನಿಲ ಮಾಯಪ್ಪ ಪೂಜಾರಿ (21) ಪ್ರಿಯಕರ, ಪಕ್ಕದ ಕಟಗೇರಿ ಗ್ರಾಮದ ವಿವಾಹಿತ ಮಹಿಳೆ “ನೀಲವ್ವ ಪದ್ಮನ್ನ ಹಬಗುಂಡಿ (24) ಮೃತ ಮಹಿಳೆ,  ಕಳೆದ ಎಂಟು ವರ್ಷ ಹಿಂದೆ ನೀಲವ್ವಗೆ ಮದುವೆಯಾಗಿತ್ತು, ವಿವಾಹಿತ ಮಹಿಳೆಗೆ ಮೂವರು ಮುದ್ದಾದ ಮಕ್ಕಳಿವೆ.

ಘಟನೆ ವಿವರ:- ಪತಿ,  ಮೂವರು ಮಕ್ಕಳೊಂದಿಗೆ ನೀಲವ್ವನ  ಚೆನ್ನಾಗಿ  ಸಂಸಾರ ಸಾಗಿಸುತ್ತಿದ್ದಳು.  ಮನೆಗೆ ಸಾಮಗ್ರಿಗಳನ್ನು ಖರೀದಿಸಲು ನೀಲವ್ವ ಮಾರ್ಕೇಟ್ ಗೆ ಹೋದಾಗ ಆಕ್ಮಸಿಕವಾಗಿ ಸುನೀಲ ಯುವಕ ಪರಿಚಯವಾಗುತ್ತದೆ.  ಪರಿಚಯ ಸಲುಗೆಗೆ ತಿರುವು, ಇವರಿಬ್ಬರ ಮದ್ಯೆ ಅಕ್ರಮ  ಸಂಬಂಧ ಬೆಳೆಯುತ್ತದೆ.

ಇದಾದ ಬಳಿಕ ಸಂಬಂಧ ಹಣದ ವ್ಯವಹಾರ ಕೂಡ ಬೆಳೆಯುತ್ತದೆ. ಯುವಕ ಸುನೀಲ ಅಲಲ್ಲಿ ಹಣವನ್ನು ಹೊಂದಿಸಿ ನೀಲ್ಲವ್ವನಿಗೆ ತಂದುಕೊಡುತ್ತಿದ್ದ. ಹಣದಾಸೆಯಿಂದ ಮಹಿಳೆ ಕೂಡ  ಸುನೀಲ ಜತೆ ಸಲುಗೆಯಿಂದ ಇರುತ್ತಾಳೆ. ಇವರಿಬ್ಬರ ಅಕ್ರಮ ಸಂಭಂದ ಮನೆ ಯಜಮಾನನಿಗೆ ತಿಳಿಯುತ್ತದೆ.ಈ ವಿಷಯವಾಗಿ ಮನೆಯಲ್ಲಿ ಕ್ಷುಲಕ್ಕ ಕಾರಣಕ್ಕೆ ಜಗಳಗಳು ಕೂಡ ನಡೆಯುತ್ತವೆ. ಇದರಿಂದ ಬೆಸತ್ತ ನೀಲವ್ವ  ಶುಕ್ರವಾರ ಪ್ರಿಯಕರ ಸುನೀಲ ಜತೆ  ಓಡಿ ಹೋಗಿದ್ದಾಳೆ.

ಮನೆ ಬಿಟ್ಟ ಬಂದ  ಪ್ರೇಮಿಗಳು ವಿಜಯಪುರ ಜಿಲ್ಲೆಯ ಬಬಲೆಶ್ವರ್ ತಾಲೂಕಿನ ನಿಡೋಣಿ ಹತ್ತಿರ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಕುರಿತು ಬಬಲೆಶ್ವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');