ರಸ್ತೆ ಕಾಮಗಾರಿಗೆ ಮರಗಳ ತೆರವು ಆಗಸ್ಟ್.10 ಒಳಗಾಗಿ ಸಾರ್ವಜನಿಕರ ಆಕ್ಷೇಪಣೆ/ಅಹವಾಲು ಸಲ್ಲಿಸಲು ಸೂಚನೆ

0
🌐 Belgaum News :

 

ಬೆಳಗಾವಿ, ಆ.2 : ಕಿತ್ತೂರ ತಾಲೂಕಿನ ಕಿತ್ತೂರ ಶಾಖಾ ವ್ಯಾಪ್ತಿಯಲ್ಲಿ ಬರುವ ಅಳ್ನಾವರ ಬೆಟಗೇರಿ (ರಾಜ್ಯ ಹೆದ್ದಾರಿ -140) ರ ಹೆದ್ದಾರಿ ಕಿ.ಮೀ 7.750 ರಿಂದ 29.500 ಕಿ.ಮೀ ಹೊನ್ನಾಪೂರ ಕ್ರಾಸದಿಂದ ವನಕಿಮಡ್ಡಿ ಪರೆಗೆ ರಸ್ತೆ ಅಭಿವೃದ್ಧಿಪಡಿಸುತ್ತಿದ್ದು, ಸದರಿ ಕಾಮಗಾರಿಗೆ ಅಪಾಯಕಾರಿಯಾಗುವ ಮರಗಳನ್ನು ತೆರವುಗೊಳಿಸಲು ಸಹಾಯಕ ಕಾರ್ಯನಿರ್ಹಕ ಅಭಿಯಂತರರು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ ವಿಭಾಗ ಕಿತ್ತೂರ ಇವರು ಪ್ರಸ್ತಾವಣೆಯನ್ನು ಸಲ್ಲಿಸಿರುತ್ತಾರೆ.

ಸದರಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಅಪಾಯಕಾರಿಯಾಗಿರುವ ಮರಗಳು 50 ಕ್ಕಿಂತ ಜಾಸ್ತಿಯಾಗಿರುವದರಿಂದ ಕರ್ನಾಟಕ ಮರಗಳ ಕಾಯ್ದೆ 1976 ರ ನಿಯಮ 8 (3) (vii) ರ ಪ್ರಕಾರ “ಪಬ್ಲಿಕ್ ಡಾಮನ್’ನಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ, ಅಹವಾಲು ಪಡೆಯಬೇಕಾಗುತ್ತದೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ/ ಅಹವಾಲುಗಳಿದ್ದಲ್ಲಿ ಆಗಸ್ಟ್.10 ರ ಒಳಗಾಗಿ ಈ ಕಛೇರಿಗೆ ಆಕ್ಷೇಪಣೆ/ಅಹವಾಲು ಸಲ್ಲಿಸಬಹುದು ಎಂದು ಗೋಲಿಹಳ್ಳಿ ವಲಯ ಅರಣ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');