ಪೊಲೀಸರ ಮೇಲೆ ಹಲ್ಲೆಗೆ ಯತ್ನ : ಆಫ್ರಿಕನ್ಸ್ ಮೇಲೆ ಲಾಠಿ ಚಾರ್ಜ್ , ಠಾಣೆ ಎದುರು ಹೈಡ್ರಾಮಾ !

0
🌐 Belgaum News :

ಬೆಂಗಳೂರು : ಪೊಲೀಸ್ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣವನ್ನು ಖಂಡಿಸಿ ಜೆ.ಸಿ ನಗರ ಠಾಣೆಯಲ್ಲಿ ಆಫ್ರಿಕನ್ ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೆಲವು ಉದ್ರಿಕ್ತರ ಗುಂಪು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಹಿನ್ನೆಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.

ಡ್ರಗ್​​ ಕೇಸ್ ಪ್ರಕರಣ ಸಂಬಂಧ ನಿನ್ನೆ ಜೆಸಿ ನಗರ ಠಾಣೆಯ ಪೊಲೀಸರು ಆಫ್ರಿಕನ್ ಪ್ರಜೆ ಜೊಯೆಲ್ ಮಾನ್ ಎಂಬಾತನನ್ನ ಬಂಧಿಸಿದ್ದರು. ಬಂಧಿತ ಆರೋಪಿಗೆ ನಿನ್ನೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಜೊಯೆಲ್ ಮಾನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಅಂತಾ ಪೊಲೀಸರು ಹೇಳಿದ್ದಾರೆ.

ಈ ದುರ್ಘಟನೆಯನ್ನ ಆಫ್ರಿಕನ್ ಪ್ರಜೆಗಳು, ಕೊಲೆ ಎಂದು ಆರೋಪಿಸಿದ್ದಾರೆ. ಪೊಲೀಸರು ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಿರುವ ಆಫ್ರಿಕನ್ ಪ್ರಜೆಗಳು ಇಂದು ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ. ಈ ವೇಳೆ ಕೆಲವು ಆಫ್ರಿಕನ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಪೊಲೀಸರು ಲಾಠಿಚಾರ್ಜ್​ ನಡೆಸಿದ್ದಾರೆ. ಜೊತೆಗೆ ಕೆಲವು ಆಫ್ರಿಕನ್ ಪ್ರಜೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಲಾಠಿ ಚಾರ್ಜ್ ವೇಳೆ ಕೆಲವು ಆಫ್ರಿಕನ್ ಪ್ರಜೆಗಳಿಗೆ ಏಟು ಬಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');