ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ ಆಗ್ರಹಿಸಿದರು.

0
🌐 Belgaum News :

ಶೇಡಬಾಳ ;-ನೂತನವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿಯವರಿಗೆ ಡಿಸಿಎಂ ಹಾಗೂ
ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲರಿಗೆ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ ಆಗ್ರಹಿಸಿದರು.

ಅವರು ಸೋಮವಾರ ಮದಬಾವಿ ಗ್ರಾಮದ ಜನಸಂಪರ್ಕ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಲಕ್ಷ್ಮಣ ಸವದಿಯವರು ಮುರುಬಾರಿ ಶಾಸಕರಾಗಿ ಸಹಕಾರ,ಹಾಗೂ ಸಾರಿಗೆ ಸಚಿವರಾಗಿ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವ ಅಪಾರ ಅನುಭವ ಹೊಂದಿದ್ದಾರೆ. ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಅವರನ್ನು ಮತ್ತೊಂದು ಬಾರಿಗೆ ವರಿಷ್ಠರು ಡಿಸಿಎಂ ಸ್ಥಾನಕ್ಕೆ ಮುಂದುವರೆಸಬೇಕೇಂದು ಆಗ್ರಹಿಸಿದರು.

ಯಡಿಯುರಪ್ಪನವರ ಸರ್ಕಾರ ರಚನೆಗೆ ಕಾರಣಿಮರ್ತರಾದ ಶ್ರೀಮಂತ ಪಾಟೀಲರು ಶಾಸಕ ಸ್ಥಾನವನ್ನು ತ್ಯಾಗ ಮಾಡಿ ಬಂದಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸುಮಾರು 80 ಲಕ್ಷ ಮರಾಠಾ ಮತದಾರರಿದ್ದಾರರಿದ್ದಾರೆ. ಅದರಲ್ಲಿ ಶೇ 90 ರಷ್ಟು ಜನರು ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರಿದ್ದಾರೆ. ರಾಜ್ಯದಲ್ಲಿ ಕೇವಲ ಇಬ್ಬರು ಮರಾಠಾ ಶಾಸಕರಿದ್ದು ಅದರಲ್ಲಿ ಶ್ರೀಮಂತ ಪಾಟೀಲರು ಹಿರಿಯರಾಗಿದ್ದು, ಎರಡು ಬಾರಿ ಶಾಸಕರಾಗಿ ಸಚಿವರಾಗಿ ರಾಜ್ಯದ ತುಂಬೆಲ್ಲ ಅಭಿವೃದ್ಧಿ ಮಾಡಿದ್ದಾರೆ.

ಕಳೆದ ಉಪ ಚುನಾವಣೆಯಲ್ಲಿ ಬಸವಕಲ್ಯಾಣದಲ್ಲಿ ಬಹು ಸಂಖ್ಯಾತ ಮರಾಠಾ ಸಮಾಜ ಇರುವದರಿಂದ 15 ದಿನಗಳ ಕಾಲ ಓಡಾಟ ಮಾಡಿ ಸಮಾಜದ ಮತಗಳನ್ನು ಪಕ್ಷದ ಅಭ್ಯರ್ಥಿಗೆ ಹಾಕಿಸುವ ಮೂಲಕ ಗೆಲುವಿಗೆ ಕಾರಣಿಕರ್ತರಾಗಿದ್ದಾರೆ. ಶುದ್ದ ಹಸ್ತದ ಚಾರಿತ್ರ್ಯವುಳ್ಳ ಶ್ರೀಮಂತ ಪಾಟೀಲರಿಗೆ ರಾಜ್ಯ ಹಾಗೂ ಕೇಂದ್ರದ ವರಿಷ್ಠರು ಮತ್ತೊಂದು ಬಾರಿಗೆ ಸಚಿವರಾಗಿ ರಾಜ್ಯದ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡಲು ವರಿಷ್ಠರು ಆಶೀರ್ವಾದ ಮಾಡಬೇಕೆಂದು ವಿನಾಯಕ ಬಾಗಡಿ ಆಗ್ರಹಿಸಿದರು.

ಈ ವೇಳೆ ಎಪಿಎಂಸಿ ಉಪಾಧ್ಯಕ್ಷ ಶಿವಾನಂದ ಮಗದುಮ್, ಮುಖಂಡರಾದ ಕಾಗವಾಡ ಬ್ಲಾಕ್ ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷ ಕೃಷ್ಣಾ ಶಿಂಧೆ,ಮುಖಂಡರಾದ ಅಶೋಕ ಪುಜಾರಿ, ಉದಯ ಪವಾರ, ಬಾಹುಬಲಿ ಉಮದಿ, ಅಪ್ಪು ಚೌಗುಲಾ, ಗಿರಮಲ್ಲ ಇಬ್ರಾಹಿಂಪುರ, ಜ್ಞಾನೇಶ್ವರ ಬಂದಾರೆ,ಬಾಳು ಮಗದುಮ್, ಮಹಾಂತೇಶ ಕಾಂಬಳೆ, ಸಂಜು ಅದಾಟೆ,ಗೋಪಾಲ ನಿವಲಗಿ, ಸದಾಶಿವ ಗಸ್ತಿ, ಪ್ರವೀಣ ಭಂಡಾರೆ ಸೇರಿದಂತೆ ಅನೇಕರು ಇದ್ದರು.

ಪವಾರ,ಸೇರಿದಂತೆ ಅನೇಕರು ಆಗ್ರಹಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');