ಜನರು ತಮ್ಮ ಮನೆಗಳನ್ನು ಬಿಟ್ಟು ಕಾಳಜಿ ಕೇಂದ್ರದಲ್ಲಿ ವಾಸವಾಗಿದ್ದರು. ರವಿವಾರದಿಂದ ಪ್ರವಾಹ ಇಳಿಮುಖವಾಗಿದ್ದು ಜನರು ತಮ್ಮ ಮನೆಗಳಿಗೆ

ಶ್ರೀಮಂತ ತಾತ್ಯಾ ಪೌಂಡೇಶನ್ ವತಿಯಿಂದ ಸಕ್ಕರೆ ಹಾಗೂ ಜಾನುವಾರುಗಳಿಗೆ ಹಿಂಡಿಯನ್ನು ವಿತರಿಸಿ ಜನರ ಸಂಕಷ್ಟದಲ್ಲಿ ಶಾಸಕ ಶ್ರೀಮಂತ ಪಾಟೀಲ

0
🌐 Belgaum News :

 ಶ್ರೀಮಂತ ತಾತ್ಯಾ ಪೌಂಡೇಶನ್ ವತಿಯಿಂದ ಸಕ್ಕರೆ ಹಾಗೂ ಜಾನುವಾರುಗಳಿಗೆ ಹಿಂಡಿಯನ್ನು ವಿತರಿಸಿ ಜನರ ಸಂಕಷ್ಟದಲ್ಲಿ ಶಾಸಕ ಶ್ರೀಮಂತ ಪಾಟೀಲ

 

ಶೇಡಬಾಳ ::- ಕಳೆದ 15 ದಿನಗಳಿಂದ ಕೃಷ್ಣಾ ನದಿಗೆ ಪ್ರವಾಹ ಬಂದಿರುವದರಿಂದ ನದಿ ತೀರದ ಜನರು ತಮ್ಮ ಮನೆಗಳನ್ನು ಬಿಟ್ಟು ಕಾಳಜಿ ಕೇಂದ್ರದಲ್ಲಿ ವಾಸವಾಗಿದ್ದರು. ರವಿವಾರದಿಂದ ಪ್ರವಾಹ ಇಳಿಮುಖವಾಗಿದ್ದು ಜನರು ತಮ್ಮ ಮನೆಗಳಿಗೆ ತೆರಳುತ್ತಿದ್ದು ಅವರಿಗೆ ರವೆ, ಎರಡನೇ ಹಂತವಾಗಿ ಶ್ರೀಮಂತ ತಾತ್ಯಾ ಪೌಂಡೇಶನ್ ವತಿಯಿಂದ ಸಕ್ಕರೆ ಹಾಗೂ ಜಾನುವಾರುಗಳಿಗೆ ಹಿಂಡಿಯನ್ನು ವಿತರಿಸಿ ಜನರ ಸಂಕಷ್ಟದಲ್ಲಿ ಶಾಸಕ ಶ್ರೀಮಂತ ಪಾಟೀಲರು ಭಾಗಿಯಾಗಿದ್ದಾರೆ ಎಂದು ಗ್ರಾಮದ ಮುಖಂಡ ಪರಶುರಾಮ ನಾಯಿಕ ಹೇಳಿದರು.

ಅವರು ಸೋಮವಾರ ದಿ.2 ರಂದು ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಎರಡನೇ ಹಂತವಾಗಿ 5 ಟನ್ ಹಿಂಡಿ, 3 ಟನ್ ರವೆ, ಹಾಗೂ 2 ಟನ್ ಸಕ್ಕರೆಯನ್ನು ವಿತರಿಸಿದರು.

ಕೃಷ್ಣಾ ನದಿಗೆ ಬಂದ ಮಹಾಪೂರದಿಂದ ಸಾಕಷ್ಟು ಗ್ರಾಮಗಳ ಜನರು ತೊಂದರೆಗೀಡಾಗಿದ್ದಾರೆ. ತಮ್ಮ ಮನೆಗಳನ್ನು ಬಿಟ್ಟು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ಮಹಾಪೂರದ ಸಂಕಟ ಮೂಕ ಪ್ರಾಣಿಗಳಿಗೂ ಬಂದೊದಗಿದೆ. ಈ ಮೂಕ ಪ್ರಾಣಿಗಳ ರೋಧನವನ್ನು ಕೇಳಿದ ಕಾಗವಾಡ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲರು ತಮ್ಮ ಫೌಂಡೇಶನ ವತಿಯಿಂದ ಕ್ಷೇತ್ರದಲ್ಲಿನ ನೆರೆಹಾವಳಿಯಿಂದ ಸಂತ್ರಸ್ತವಾಗಿರುವ ಜಾನುವಾರುಗಳಿಗೆ ಪೌಷ್ಠಿಕ ಆಹಾರವಾದ ಎಣ್ಣೆಕಾಳಿನ ಹಿಂಡಿಯನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೆಶಕ ವಿಶ್ವನಾಥ ಪಾಟೀಲ ಹೇಳಿದರು.

ಅವರು ಇಂದು ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನೆರೆ ಸಂತ್ರಸ್ತ ಗ್ರಾಮಗಳಾದಕೃಷ್ಣಾ-ಕಿತ್ತೂರ, ಬಣಜವಾಡ ಹಾಗೂ ಕಾತ್ರಾಳ ಗ್ರಾಮಗಳಲ್ಲಿ ಆಹಾರ ಧಾನ್ಯ, ಹಾಗೂ ಜಾನುವಾರುಗಳಿಗೆ ಹಿಂಡಿಯನ್ನು ವಿತರಿಸಿ ಮಾತನಾಡುತ್ತಿದ್ದರು.
ಅಂಥವರಿಗೆ ಶಾಸಕ ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ಸಂತ್ರಸ್ತರಿಗೆ ನೈತಿಕ ಬೆಂಬಲ ನೀಡುವ ಮೂಲಕ ಪ್ರತಿ ಕಾಳಜಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕೈಗೊಳ್ಳುತ್ತಿದ್ದಾರೆ.

ಈ ವೇಳೆ ಸಚಿವರ ಆಪ್ತ ಸಹಾಯಕರಾದ ವಿನಾಯಕ ಶಿಂಧೆ, ಪ್ರಶಾಂತ ಅಪರಾಜ ಮುಖಂಡರಾದ ದತ್ತಾತ್ರೇಯ ಕದಮ್ ಸಂಬಾಜಿ ಪವಾರ,ಯಮನು ಪಾಟೀಲ, ರಾಜು ಮುಜಾವರ, ಗೋಪಾಲ ಅರ್ಜುನವಾಡ, ಬಸು ಟಿಂಗಾಣಿ, ಲಗಮಣ್ಣ ಕಾಂಬಳೆ, ಸದಾಶಿವ ಪಾಟೀಲ, ಮಹಾದೇವ ಬೂಸಾಣಿ,ಹರೀಬಾ ಹಂಚಿನಾಳ, ವಿಠ್ಠಲ ಬಡಿಗೇರ, ಮಹಾಲಿಂಗ ಹೊನವಾಡ ಸೇರಿದಂತೆ ಅನೇಕರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');