ಪ್ರವಾಹ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿದ ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ

0
🌐 Belgaum News :

 

ಅಥಣಿ: ಕೃಷ್ಣಾ ನದಿಯ ಸಂತ್ರಸ್ತರು ಯಾವುದೇ ಕಾರಣಕ್ಕೂ ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ, ನಿಮ್ಮ ನೆರವಿಗೆ ಸರಕಾರ ಬದ್ಧವಾಗಿದೆ, ನದಿಯ ರಭಸಕ್ಕೆ ಹಾಳಾದ ರಸ್ತೆ, ವಿದ್ಯುತ್ ಟ್ರಾನ್ಸಫರ್ಮರ, ಮನೆ ಸೇರಿದಂತೆ ಎಲ್ಲವುಗಳನ್ನು ಸರಿಪಡಿಸಿ ಕೊಡಲಾಗುವುದು. ನಾನು ನಿಮ್ಮ ಕುಟುಂಬದ ಸದಸ್ಯನಾಗಿ ಎಲ್ಲರ ಕಷ್ಟದಲ್ಲಿ ಪಾಲ್ಗೊಳ್ಳುತ್ತನೆ ಎಂದು ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು.

ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಸೋಮವಾರ ಕೃಷ್ಣಾ ನದಿ ಪ್ರವಾಹದಿಂದಾಗಿ ಹಾಳಾದ ರಸ್ತೆ ಪರಿಶೀಲನೆ ಮಾಡಿ ಮಾತನಾಡುತ್ತಾ ಕ್ಷೇತ್ರದ ಅಭಿವೃದ್ದಿ ಒಂದೇ ನನ್ನ ಕನಸಾಗಿದೆ. ಈಗಾಗಲೇ ಅನೇಕ ಯೋಜನೆಗಳನ್ನು ಅಥಣಿ ಮತ ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಪ್ರವಾಹ ಬಂದ ದಿನವೇ ಎಲ್ಲ ಕಾಳಜಿ ಕೇಂದ್ರಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು ಅಗತ್ಯ ಇರುವ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಕ್ಷೇತ್ರದಿಂದ ಕೆಲಸದ ನಿಮಿತ್ಯ ತೆರಳಿದ್ದೆ ಮತ್ತೆ ಜನರ ಸೇವೆಗಾಗಿ ಬಂದಿದ್ದೇನೆ, ತಾಲೂಕು ಆಡಳಿತದ ಎಲ್ಲಾ ಅಧಿಕಾರಿಗಳು ಮಳೆ ಚಳಿಯೆನ್ನದೆ ನಿರಂತರವಾಗಿ ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ.ಅವರ ಮಾನವೀಯತೆ ದೊಡ್ಡದು ಸಂಕಷ್ಟದ ಸಮಯದಲ್ಲಿ ಜನಪರ ಕೆಲಸ ಮಾಡುವ ಹಗಲು ರಾತ್ರಿ ಶ್ರಮಪಟ್ಟು ಜನರೊಂದಿಗೆ ನಿಲ್ಲುವ ಅಧಿಕಾರಿ ವರ್ಗ ಅಥಣಿ ತಾಲೂಕಿನಲ್ಲಿ ಇರುವದರಿಂದ ಜನರು ಧೈರ್ಯದಿಂದ ಇದ್ದು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಥಣಿ ತಹಸೀಲ್ದಾರ ದುಂಡಪ್ಪ ಕೋಮಾರ, ತಾ.ಪಂ. ಇ.ಒ ಶೇಖರ ಕರಬಸಪ್ಪಗೋಳ, ಪಿಎಸ್ಐ ಕುಮಾರ ಹಾಡಕಾರ, ಲೋಕೋಪಯೋಗಿ ಇಲಾಖೆಯ ಗೌಡಪ್ಪ ಘೂಳಪ್ಪನವರ, ಎ.ಜಿ. ಮುಲ್ಲಾ, ಮಲ್ಲಿಕಾರ್ಜುನ ಮಗದುಮ್, ಈರಣ್ಣ ವಾಲಿ, ಉಪ ತಹಸೀಲ್ದಾರ ಮಹಾದೇವ ಬಿರಾದಾರ, ಕಂದಾಯ ವೃತ್ತ ನಿರೀಕ್ಷಕ ಶಿವಾನಂದ ಮೆಣಸಂಗಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ತಾಲೂಕಿನ ಶೇಗುಣಸಿ, ದರೂರ, ಸಂಕರಟ್ಟಿ, ಖವಟಕೊಪ್ಪ, ನದಿ ಇಂಗಳಗಾಂವ, ತೀರ್ಥ,ಸಪ್ತಸಾಗರ ಸೇರಿದಂತೆ ಹಲವು ಕಾಳಜಿ ಕೇಂದ್ರಗಳಿಗೆ ಶಾಸಕ ಮಹೇಶ್ ಕುಮಠಳ್ಳಿ ಭೇಟಿ ನೀಡಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');