ನೆರೆ ಸಂತ್ರಸ್ತರಿಗೆ ಶಾಸ್ವತ ಪರಿಹಾರ ಕೊಡಿ ಬಸವ ಜಯಮೃತ್ಯುಜಯ ಸ್ವಾಮೀಜಿ

0
🌐 Belgaum News :

 

ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಗಜಾನನ ಮಂಗಸೂಳಿಯವರ ಮನೆಗೆ ಆಗಮಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಗಳಾದ ಬಸವ ಜಯಮೃತ್ಯುಂಜಯ ಸ್ವಾಮಿಗಳ ಪಾದಪೂಜೆ ನೆರವೇರಿಸಿ ಮಾಲಾರ್ಪಣೆ ಮಾಡುವ ಮೂಲಕ ಗೌರವಿಸಲಾಯಿತು.
ಉತ್ತರ ಕರ್ನಾಟಕದ ಪ್ರವಾಹದಿಂದ ನೆರೆ ಸಂತ್ರಸ್ತರ ಪರಿಸ್ಥಿತಿ ದುಸ್ಥಿತಿಯಾಗಿದ್ದು ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗಿರುವದರಿಂದ ಈ ಭಾಗದ ಜನರ ಸಮಸ್ಯೆಗೆ ತಕ್ಷಣವೇ ಸಿಎಂ ಸ್ಪಂದಿಸುವಂತೆ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದೇನೆ.ಸಂಪುಟ ರಚನೆಯ ಬಳಿಕ ವಿಶೇಷ ಕಾಳಜಿ ವಹಿಸುವದಾಗಿ ಅವರು ತಿಳಿಸಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮಿಜಿ ಹೇಳಿದರು.

ಅಥಣಿ ತಾಲೂಕಿನಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಸತ್ತಿ,ಸವದಿ,ಜನವಾಡ,ದರೂರ,ಹಲ್ಯಾಳ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಅಥಣಿ ಪಟ್ಟಣದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರ ನಿವಾಸದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಅಷ್ಟೆ ಅಲ್ಲ ಇಡೀ ದೇಶದಲ್ಲಿ ಪ್ರಕೃತಿಯ ವ್ಯತ್ಯಾಸವಾಗುತ್ತಿದ್ದು ಮಳೆಗಾಲದಲ್ಲಿ ಬಿಸಿಲು,ಬೇಸಿಗೆಯಲ್ಲಿ ಮಳೆ ಈ ರೀತಿಯ ವೈಪರೀತ್ಯಗಳು ನಡೆಯುತ್ತಿವೆ.ಕೃಷ್ಣಾ,ದುಧಗಂಗಾ,ವೇದಗಂಗಾ,ಹಿರಣ್ಯಕೇಶಿ,ಘಟಪ್ರಭಾ, ಮಲಪ್ರಭಾ ನದಿಗಳು ಸೇರಿದಂತೆ ಹಲವು ನದಿಗಳು ಉಕ್ಕಿ ಹರಿದು ಅಪಾರ ಪ್ರಾಮಾಣದ ಬೆಳೆಹಾನಿಯಾಗಿದ್ದು ಜನರು ಮನೆಗಳನ್ನು ತೊರೆದಿದ್ದು ಜಾನುವಾರುಗಳ ಮೂಕರೊಧನ ಮುಗಿಲುಮುಟ್ಟಿದೆ.ನಾವು ಭೇಟಿ ನೀಡಿದ ಹಲವು ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರು ಶಾಸ್ವತ ಪರಿಹಾರಕ್ಕಾಗಿ ಮತ್ತು ಮನೆಗಳ ಹಕ್ಕುಪತ್ರಕ್ಕಾಗಿ ಬೇಡಿಕೆ ಇಟ್ಟಿರುವದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇನೆ ಸಂತ್ರಸ್ತರ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸುವ ಭರವಸೆಯನ್ನು ಅವರು ಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶ್ರೀಕಾಂತ ಪೂಜಾರಿ, ಎಸ್.ಕೆ. ಬುಟಾಳಿ,ಬಿ.ಕೆ.ಬುಟಾಳಿ, ರಮೇಶ ಸಿಂಧಗಿ, ಸುರೇಶ ಪಾಟೀಲ,ಸುನಿಲ ಸಂಕ, ಧರೆಪ್ಪಾ ಠಕ್ಕಣ್ಣವರ,ಅನಿಲ ಸುಣದೋಳಿ,ರಾವಸಾಬ ಐಹೊಳೆ, ಸುನಿತಾ ಐಹೊಳೆ, ರಾಜು ಜಮಖಂಡಿಕರ,ರವಿ ಬಡಕಂಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');