ಮೀಸಲಾತಿ ಸಿಗುವವರೆಗೆ ಹೋರಾಟ ನಿರಂತರ: ಬಸವಮೃತ್ಯುಂಜಯ ಸ್ವಾಮೀಜಿ

0
🌐 Belgaum News :
ಅಥಣಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಗಜಾನನ ಮಂಗಸೂಳಿಯವರ ನಿವಾಸಕ್ಕೆ ಪಂಚಮಸಾಲಿ ಪೀಠದ ಜಗದ್ಗುರು ಪರಮ ಪೂಜ್ಯ ಬಸವಜಯ ಮೃತುಂಜಯ ಸ್ವಾಮೀಜಿ ಆಗಮಿಸಿ ಆಶೀರ್ವದಿಸಿದರು. ಗಜಾನನ ಮಂಗಸೂಳಿ ದಂಪತಿಗಳು ಈ ವೇಳೆ  ಬಸವಮೃತ್ಯುಂಜಯ ಸ್ವಾಮೀಜಿಗಳ ಪಾದಪೂಜೆಯ ಮೂಲಕ ಸ್ವಾಮೀಜಿಯವರ ‌ಆಶಿರ್ವಾದ ಪಡೆದರು.
ಈ ವೇಳೆ ಮಾತನಾಡಿದ ಬಸವ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮಾಜವನ್ನು ೨ ಎ ಗೆ ಸೇರಿಸುವಂತೆ ಆಗ್ರಹಿಸಿ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಿದ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ವೈ ಅವರು ಆ ಸಮಯದಲ್ಲಿ ಭರವಸೆ ನೀಡಿದ್ದರು ಆದರೆ ರಾಜಕೀಯ ಬೆಳವಣಿಗೆ ಇಂದ ಅವರು ರಾಜಿನಾಮೆ ನೀಡಿದ್ದು ಸದ್ಯ ಉತ್ತರ ಕರ್ನಾಟಕದವರೆ ಆಗಿರುವ ಬಸವರಾಜ ಬೊಮ್ಮಾಯಿ ಅವರು ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಒಂದು ವೇಳೆ ಸೆಪ್ಟೆಂಬರ್ ಕೊನೆಯ ವಾರದ ಒಳಗೆ ಮೀಸಲಾತಿ ಕೊಡದೆ ಇದ್ದಲ್ಲಿ ಮಲೆಮಹದೇಶ್ವರ ಬೆಟ್ಟದಿಂದ ಮತ್ತೆ ಪಾದಯಾತ್ರೆ ನಡೆಸಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಹೋರಾಟವನ್ನು ಮುಂದುವರೆಸಲಿದ್ದೆವೆ ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಮುಖಂಡರಾದ ರಮೇಶ ಪಾಟೀಲ, ಸಮಾಜದ ಅಧ್ಯಕ್ಷರಾದ ಅವಿನಾಶ ನಾಯಿಕ,ಸಮಾಜದ ಮುಖಂಡರುಗಳಾದ ಶ್ರೀಶೈಲ ಸಂಕ, B. R. ಪಾಟೀಲ ಸತ್ತಿ,ಲಕ್ಕಪ್ಪ ಮುಢಸಿ,ಸುರೇಶ ಪಾಟೀಲ, ಸುನಿಲ್ ಸಂಕ,ಧರೆಪ್ಪ ಠಕ್ಕ ನ್ನವರ್ ,ಭಾಲಚಂದ್ರ ಬುಕಿಟಗಾರ,ಮುರುಗೇಶ ಬಾನೆ,ಪ್ರಮೋದ ಬಿಳ್ಳುರ,ಲಿಂಗಾಯತ ಉಪ ಪಂಗಡಗಳ ಮುಖಂಡರುಗಳಾದ ಮುರಿಗೆಪ್ಪಾ ತೊದಲಬಾಗಿ,ಶಂಭುಲಿಂಗ ಮಮದಾಪುರ,ಮನೋಹರ ಹಂಜಿ, ಸಂಜಯ ತೇಲಸಂಗ,ಅಣ್ಣಾಸಾಬ ತೇಲಸಂಗ, ಮಹೇಶ ಮೇತ್ರಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಮುಖಂಡರುಗಳಾದ S. K. ಬೂಟಾಳಿ,ಅನಿಲ ಸುಣದೊಳ್ಳಿ, ಸತ್ಯಪ್ಪ ಬಾಗೆನ್ನವರ,ಬಸು ಬೂಟಾಳಿ,ರಮೇಶ ಸಿಂದಗಿ, ರಾಜು ಜಮಖಂಡಿಕರ,ಸುನಿತಾ ಐಹೊಳೆ, ರಾವಸಾಬಐಹೊಳೆ, ರವಿ ಬಡಕಂಬಿ ಸೇರಿದಂತೆ ಲಿಂಗಾಯತ ಸಮಾಜದ & ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');