ಅಕ್ರಮವಾಗಿ ಕಲ್ಲಾಮೆ ಸಾಗಾಟ ಮಾಡುತ್ತಿದ್ದ ಆರೋಪಿಗಳಿಬ್ಬರು ಅಂದರ್..!

0
🌐 Belgaum News :

ಬೆಳಗಾವಿ: ಅಕ್ರಮವಾಗಿ ಜಲಚರ ಪ್ರಾಣಿ ಕಲ್ಲಾಮೆಯನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಪೊಲೀಸ್ ರು ಮಂಗಳವಾರ ಬಂಧಿಸಿದ್ದಾರೆ.

ಚಿಕ್ಕೋಡಿ ವಿಜಯ ನಗರದ ಪುಂಡಲೀಕ ಲಕ್ಷಣ ನಸಲಾಪುರೆ (27) ಮತ್ತು ವಡಗಾವಿಯ ಮರಗಾಯಿ ಗಲ್ಲಿಯ ಶಶಾಂಕ ನಾಗೇಶ ಪೂಜಾರಿ (23)  ಬಂಧಿತರು,  ನಗರದ ಯಡಿಯೂರಪ್ಪ ಮಾರ್ಗದ ಜಕಾತಿ ನಾಕಾದ ಕಿಡಿಗೇಡಿಗಳು ಕಲ್ಲಾಮೆಗಳನ್ನು ಮಾರಾಟ ಮಾಡುವ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿ  ದಾಳಿ ನಡೆಸಿದ್ದು, ಸಿಐಡಿ ಅರಣ್ಯ ಸಂಚಾರಿ ದಳ ಬೆಳಗಾವಿ ಕಾರ್ಯಾಲಯದ ಡಲ್ಲು.ಎಲ್.ಓ.ಆರ್ ನಂ: 05/2021, ಕಲಂ: 2(16), 9, 39, 44,  51 ವನ್ಯಜೀವಿ ಸಂರಕ್ಷಣಾ ಕಾಯ್ದೆ-1972, ಪ್ರಕಾರ ಪ್ರಿನ್ಸಿಪಲ್ ನ್ಯಾಯಾಲಯದ ಮುಂದೆ ಆರೋಪಿತರನ್ನು ಹಾಜರುಪಡಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');