ಸಚಿವ ಸ್ಥಾನ ನೀಡುವಂತೆ ಮರಾಠಾ ಸಮಾಜದ ಮುಖಂಡರು ಹಾಗೂ ಲೋಕುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ರಾಮಾ ನಾನಾ ಭಗತ ಮನವಿ ಮಾಡಿಕೊಂಡಿದ್ದಾರೆ.

0
🌐 Belgaum News :

ಶೇಡಬಾಳ : ಕರ್ನಾಟಕ ರಾಜ್ಯದ ಕ್ಷತ್ರೀಯ ಮರಾಠಾ ಸಮಾಜದ ಏಕೈಕ ಶಾಸಕರಾಗಿರುವ ಹಾಗೂ ಸಚಿವರಾಗಿ ಒಳ್ಳೆಯ ಕೆಲಸ ಮಾಡಿರುವ ಶ್ರೀಮಂತ ಬಾಳಾಸಾಬ ಪಾಟೀಲರಿಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಮರಾಠಾ ಸಮಾಜದ ಮುಖಂಡರು ಹಾಗೂ ಲೋಕುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ರಾಮಾ ನಾನಾ ಭಗತ ಮನವಿ ಮಾಡಿಕೊಂಡಿದ್ದಾರೆ.

ಅವರು ಮಂಗಳವಾರ ದಿ. 3 ರಂದು ಲೋಕುರ ಗ್ರಾಮದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ಶಾಸಕ ಶ್ರೀಮಂತ ಪಾಟೀಲರು ಕಳೆದ ಒಂದುವರೆ ವರ್ಷಗಳಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಜೈನರು, ಮುಸ್ಲಿಮರು, ಕ್ರೈಸ್ತರು ಎಂಬ ಯಾವುದೇ ಜಾತಿ, ಮತ ಭೇಧವಿಲ್ಲದೇ ಸರ್ವರ ಏಳಿಗೆಗಾಗಿ ಶ್ರಮಿಸಿದ್ದಾರೆ.

 

ಅವರ ಅಧಿಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಜೈನ ಮಂದಿರ, ಮಸೀದಿಗಳ ಅಭಿವೃದ್ದಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಕಾರಣ ನೂತನ ಮಂತ್ರಿ ಮಂಡಳದಲ್ಲಿಯೂ ಅವರನ್ನು ಸಚಿವರನ್ನಾಗಿ ಮಾಡುವಂತೆ ಸಮಸ್ತ ಕರ್ನಾಟಕ ರಾಜ್ಯದ ಕ್ಷತೀಯ ಮರಾಠಾ ಸಮಾಜದ ವತಿಯಿಂದ ವಿನಂತಿಸಿಕೊಳ್ಳುತ್ತೇವೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');