ಅಪ್ರಾಪ್ತ ಬಾಲಕಿಗೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ

0
🌐 Belgaum News :

ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ  ಬಾಲಕಿಗೆ ಯುವಕ  ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ  ನಡೆದಿದ್ದು, ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಪೋಷಕರು ಒತ್ತಾಯಿಸಿದ್ದಾರೆ.

ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ತೇರದಾಳ ಹಾಗೂ ಹಾರೂಗೇರಿ ಮಧ್ಯದ ರಸ್ತೆಯಲ್ಲಿ 16 ವರ್ಷದ  ಅಪ್ರಾಪ್ತ   ಬಾಲಕಿಗೆ ಅಮೀರ ಲಾಲಸಾಬ ಜಮಾದಾರ (20) ಎಂಬ ಯುವಕನಿಂದ ಚಾಕುವಿನಿಂದ ಇರಿದು  ಕೊಲೆ ಮಾಡಿದ್ದಾನೆ.

ಸುಮಾರು ದಿನಗಳಿಂದ ಬಾಲಕಿಯನ್ನು ಪ್ರೀತಿಸುತ್ತಿದ್ದು  ಬಾಲಕಿಯು ಪ್ರೀತಿಯನ್ನ ನಿರಾಕರಿಸಿದ್ದಕ್ಕೆ ಯುವಕನು ಬಾಲಕಿಯನ್ನು ಹಾಡುಹಗಲೇ ರಸ್ತೆಯ ಮಧ್ಯದಲ್ಲಿ ಬಾಲಕಿಯನ್ನು ತಡೆದು ಬಾಲಕಿಯ ಬಲಗೈಗೆ ಇರಿದು ನಂತರ ಎಡಗಡೆಗೆ ಹೊಟ್ಟೆ ಹಾಗೂ ಎದೆಯ ಮಧ್ಯ ಭಾಗದಲ್ಲಿ ತೀವ್ರವಾಗಿ ಇರಿದು ಹತ್ಯೆ ಮಾಡಿದ್ದಾನೆ.

ಆ ಬಾಲಕಿಯು ಸ್ಥಳದಲ್ಲಿ ಬಿದ್ದು ಹೊರಳಾಡುತಿದ್ದಾಳೆ ನಂತರ ಅವಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಕುಡಚಿ ಹಾಗೂ ಹಾರೂಗೇರಿ ಪೊಲೀಸ್ ಅಧಿಕಾರಿಗಳು ಆರೋಪಿಗಾಗಿ ಬಲೆ ಬಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');