ಮಂತ್ರಿಗಿರಿ ಯಾರಿಗೆ ಸಿಕ್ಕರೂ ನಮಗೆ ಸಂತೋಷ: ಮಾಜಿ ಶಾಸಕ ಡೋಂಗರ್ ಗಾಂವ.

0
🌐 Belgaum News :
ಅಥಣಿ ವರದಿ: ರಾಜ್ಯ ರಾಜಕಾರಣದಲ್ಲಿ ಬಿ ಎಸ್ ವೈ ರಾಜಿನಾಮೆ ಬಳಿಕ ಯಾರಿಗೆ ಸಿಗುತ್ತೆ ಮಂತ್ರಿಗಿರಿ ಎನ್ನುವ ಕೂತುಹಲ ವ್ಯಕ್ತವಾಗುತ್ತಿದ್ದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದಬಳಿಕ ಜನಸಾಮಾನ್ಯರಲ್ಲಿ ತೀವ್ರ ಕೂತುಹಲ ಉಂಟಾಗಿದೆ.ಆದರೆ ಇತ್ತಕಡೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವ ಮೂಲಕ ರಾಜ್ಯದಲ್ಲಿ ಬಿಎಸ್ ವೈ ನೇತೃತ್ವದ ಸರ್ಕಾರ ರಚನೆಗೆ ಕಾರಣವಾಗಿದ್ದ ಹದಿನೇಳು ಜನರ ಪೈಕಿ ಬೆಳಗಾವಿಯ ಮೂರುಜನ ಶಾಸಕರು ಬಹಳಷ್ಟು ಸಹಕಾರ ನೀಡಿದ್ದರು. ಮಾಜಿ ಜಲಸಂಪನ್ಮೂಲ ಸಚೀವ ರಮೆಶ್ ಜಾರಕಿಹೊಳಿ,ಜವಳಿ ಖಾತೆ ಸಚೀವ  ಶ್ರೀಮಂತ ಪಾಟೀಲ, ಮತ್ತು ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಇವರು ಕಾಂಗ್ರೆಸ್ ನಿಂದ ಬಂದವರಾಗಿದ್ದು ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಸದ್ಯ ಮಂತ್ರಿಗಿರಿ ಯಾರಿಗೆ ಸಿಕ್ಕರೂ ನಮಗೆ ಸಂತೋಷ ಇದೆ ಎನ್ನುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಸದ್ಯ ಹಾಲಿ ಶಾಸಕ ಮಹೇಶ ಕುಮಠಳ್ಳಿ ತಮ್ಮ ಶಿಷ್ಯರಾಗಿದ್ದಾರೆ.
ಲಕ್ಷ್ಮಣ ಸವದಿ ಅವರೊಂದಿಗೆ ಸಕ್ಕರೆ ಕಾರ್ಖಾನೆ ನಿರ್ಮಾಣ ಸಮಯದಲ್ಲಿ ಮತ್ತು ಸಾಕಷ್ಟು ಕೆಲಸಗಳಲ್ಲಿ ನಾವು ಕೂಡ ಸಹಕರಿಸಿದ್ದೇವೆ.ಯಾರಿಗೆ ಮಂತ್ರಿಗಿರಿ ಸಿಕ್ಕರೂ ಕ್ಷೇತ್ರದ ಮತ್ತು ರಾಜ್ಯದ ಅಭಿವೃದ್ದಿ ಆಗಲಿ ಎನ್ನುವದು ನಮ್ಮ ಆಶಯವಾಗಿದೆ ಸದ್ಯ ಅಥಣಿಯಲ್ಲಿ ಮಂತ್ರಿ ಸ್ಥಾನ ಯಾರಿಗೆ ಸಿಕ್ಕರೂ ನಮಗೆ ಸಂತೋಷವಿದೆ ಎಂದಿದ್ದಾರೆ.ಅಥಣಿ ತಾಲ್ಲೂಕಿನ,ಶೇಗುಣಸಿ ನದಿ ಇಂಗಳಗಾಂವ,ಸಂಕ್ರಟ್ಟಿ,ತೀರ್ಥ,ಸಪ್ತಸಾಗರ ಮೊದಲಾದ ಗ್ರಾಮಗಳ ನೆರೆ ಸಂತ್ರಸ್ಥರ ಸಂಕಷ್ಟ ಆಲಿಸಿ ಶಾಸ್ವತ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯುವದಾಗಿ ಹೇಳಿದ ಅವರು ನಂತರ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಈ ವೇಳೆ ಮಹಂತೇಶ ಬಾಡಗಿ, ನಿಶಾಂತ ದಳವಾಯಿ, ಶಿವಾನಂದ ಸೌದಾಗರ, ಮಂಜು ಹೋಳಿಕಟ್ಟಿ,ಯಾಸೀನ್ ಝಾರೆ,ಸೇರಿದಂತೆ ಹಲವರು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');