ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಕೊಡಿ: ಮುಖಂಡ ದತ್ತಾ ವಾಸ್ಟರ್ ಆಗ್ರಹ

0
🌐 Belgaum News :
ಅಥಣಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಆಗಿ ಮುಂದುವರೆಸುವಂತೆ ಲಕ್ಷ್ಮಣ ಸವದಿ ಅಭಿಮಾನಿಗಳ ಆಗ್ರಹ ಕೇಳಿ ಬಂದಿದೆ. ಜನಪರ ಕಾಳಜಿ ವಹಿಸುವ ಮಾಜಿ ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮಂತ್ರಿಗಿರಿ ಕೊಡುವಂತೆ ಬಿಜೆಪಿ ಮುಖಂಡ ದತ್ತಾ ವಾಸ್ಟರ್ ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಎಂದೂ ಅಧಿಕಾರಕ್ಕಾಗಿ ಹಾತೊರೆದವರಲ್ಲ ಅಧಿಕಾರ ಇದ್ದಾಗಲೂ ಇಲ್ಲದಾಗಲೂ ಅವರ ರೈತಪರ,ಮತ್ತು ಜನಪರ ಕಾಳಜಿ ವಹಿಸಿದ ಜನಪ್ರತಿನಿಧಿ ಅಂದರೆ ಲಕ್ಷ್ಮಣ ಸವದಿ ಅವರೆ ಅನ್ನುವದು ಎಲ್ಲ ಜನರಿಂದ ಕೇಳಿಬರುವ ಒಂದೆ ಮಾತಾಗಿದೆ.
ಕಲಬುರಗಿ, ರಾಯಚೂರು, ಕೊಪ್ಪಳ, ಉಸ್ತುವಾರಿ ಸೇರಿದಂತೆ ಸಾರಿಗೆ ಸಚೀವರಾಗಿ ಸಹಕಾರ ಸಚೀವರಾಗಿ ಅವರು ನೀಡಿದ ಸೇವೆ ದೊಡ್ಡದು. ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ರಚನೆಯಲ್ಲೂ ಮಹತ್ವದ ಪಾತ್ರವಹಿಸಿ ತಾವು ಮಾತ್ರ ತೆರೆ ಮರೆಯಲ್ಲೆ ಉಳಿದವರು.
 ದಾನ ಧರ್ಮದಲ್ಲಿ ಬಿಚ್ಚು ಮನಸ್ಸಿನಿಂದ ಕೊವಿಡ್ ಸಮಯದಲ್ಲಿ ಎರಡು ಬಾರಿ ಲಾಕ್ ಡೌನ್ ಆದಾಗ ಕ್ಷೇತ್ರದ ಜನರಿಗೆ ಧವಸ ಧಾನ್ಯಗಳ ಕಿಟ್ ಹಂಚುವ ಮಹತ್ವದ ಕೆಲಸ ಮಾಡಿದ್ದಲ್ಲದೆ ಕೊರೊನಾ ಪೀಡಿತ ಜನರ ಜಿವರಕ್ಷಣೆಗಾಗಿ ಎಂಭತ್ತು ಲಕ್ಷ ವೆಚ್ಚದ ಆಕ್ಸಿಜನ್ ಘಟಕ ಮತ್ತು ಕಾನ್ಸಂಟ್ರೇಟರ್ ಹಾಗೂ ಹೈಟೆಕ್ ಅಂಬುಲೆನ್ಸ ಮತ್ತು ಬಸ್ ಅಂಬುಲೆನ್ಸ ಕೊಡುಗೆಯಾಗಿ ನೀಡುವ ಮೂಲಕ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ.
ಖಿಳೆಗಾಂವ ಏತ ನೀರಾವರಿ, ಬಸವೇಶ್ವರ ಏತ ನೀರಾವರಿ ಸೇರಿದಂತೆ ಬರಪೀಡಿತ ತಾಲ್ಲೂಕಿನಲ್ಲಿ ಬರದ ನಾಡಿನ ಭಗೀರಥ ಅನ್ನಿಸಿಕೊಂಡ ಲಕ್ಷ್ಮಣ ಸವದಿ ಅವರ ಸೇವೆ ಮಹತ್ತರವಾದದ್ದು  ಆದ್ದರಿಂದ ಅವರ ಜನಸೇವೆಯನ್ನು ಪರಿಗಣಿಸಿ ಬಿಜೆಪಿ ಹೈ ಕಮಾಂಡ್ ಮಂತ್ರಿಗಿರಿ ನೀಡುವ ಮೂಲಕ ಭಾಜಪಾ ಕಾರ್ಯಕರ್ತರ ಆಸೆಯನ್ನು ಈಡೇರಿಸಬೇಕು ಇದು ನಮ್ಮ ವೈಯುಕ್ತಿಕ ಅಭಿಪ್ರಾಯ ವಾಗಿರದೆ ಕ್ಷೇತ್ರದ ಮತದಾರರ ಅಭಿಪ್ರಾಯವೂ ಆಗಿದೆ ಎಂದರು.
Attachments area
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');