ಮಹಿಳಾ ಹಾಕಿ ಚಿನ್ನದ ಕನಸು ಭಗ್ನ: ಅರ್ಜೇಂಟಿನಾ ವಿರುದ್ಧ ಮುಗ್ಗರಿಸಿದ ಭಾರತ

0
🌐 Belgaum News :

ಟೋಕಿಯೊ: ಒಲಿಂಪಿಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಕಿಯ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದ್ದ ಭಾರತ ಮಹಿಳಾ ತಂಡ ಫೈನಲ್​ಗೇರಲು ವಿಫಲವಾಗಿದೆ.

ಅರ್ಜೇಂಟಿನಾ ವಿರುದ್ಧ ನಡೆದ ಸೆಮಿ ಫೈನಲ್ ಕದನದಲ್ಲಿ ಭಾರತ 1-2 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಆದರೆ, ಭಾರತಕ್ಕೆ ಕಂಚು ಗೆಲ್ಲುವ ಅವಕಾಶವಿದ್ದು, ಇನ್ನೊಂದು ಸೆಮಿ ಫೈನಲ್​ನಲ್ಲಿ ಸೋಲುವ ತಂಡದ ವಿರುದ್ಧ ಪಂದ್ಯವಿದೆ. ಇದರಲ್ಲಿ ಭಾರತ ಮಹಿಳಾ ಹಾಕಿ ತಂಡ ಗೆದ್ದರೆ ಕಂಚಿನ ಪದಕ ಮುಡಿಗೇರಿಸಿಕೊಳ್ಳಲಿದೆ.

ಪಂದ್ಯ ಆರಂಭವಾದ ಕೇವಲ ಎರಡು ನಿಮಿಷದಲ್ಲೇ ಭಾರತಕ್ಕೆ ಮೊದಲ ಗೋಲು ದಕ್ಕಿತು. ವಂದನಾ ಅವರು ತಂಡಕ್ಕೆ ಖಾತೆ ತೆರೆದು ಮೊದಲ ಕ್ವಾರ್ಟರ್​ನಲ್ಲಿ ಭಾರತ 1-0 ಮುನ್ನಡೆ ಸಾಧಿಸುವಂತೆ ಮಾಡಿದರು. ಎರಡನೇ ಕ್ವಾರ್ಟರ್​ನ ಆರಂಭದಲ್ಲಿ ಅರ್ಜೇಂಟಿನಾ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡು ತನ್ನ ಖಾತೆ ತೆರೆಯಿತು.

ಮೂರನೇ ಕ್ವಾರ್ಟರ್​ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಂಡ ಅರ್ಜೇಂಟಿನಾ 2-1ರ ಮುನ್ನಡೆ ಸಾಧಿಸಿತು. ಮೂರನೇ ಮತ್ತು ಅಂತಿಮ ನಾಲ್ಕನೆ ಕ್ವಾರ್ಟರ್​ನಲ್ಲಿ ಆಕ್ರಮಣ ಆಟ ಪ್ರದರ್ಶಿಸಿದ ಅರ್ಜೇಂಟಿನಾ ಭಾರತಕ್ಕೆ ಗೋಲು ದಾಖಲಿಸಲು ಅವಕಾಶವೇ ಕೊಡಲಿಲ್ಲ. ಅಂತಿಮವಾಗಿ ಅರ್ಜೇಂಟಿನಾ 2-1 ಗೋಲುಗಳ ಅಂತರದಿಂದ ಗೆದ್ದು ಫೈನಲ್​ಗೆ ಪ್ರವೇಶ ಪಡೆದಿದೆ. ಭಾರತ ಮಹಿಳಾ ಹಾಕಿ ತಂಡದ ಚೊಚ್ಚಲ ಫೈನಲ್ ಕನಸು ಭಗ್ನಗೊಂಡಿದೆ.

ಟೋಕಿಯೊ: ಒಲಿಂಪಿಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಕಿಯ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದ್ದ ಭಾರತ ಮಹಿಳಾ ತಂಡ ಫೈನಲ್​ಗೇರಲು ವಿಫಲವಾಗಿದೆ.

ಅರ್ಜೇಂಟಿನಾ ವಿರುದ್ಧ ನಡೆದ ಸೆಮಿ ಫೈನಲ್ ಕದನದಲ್ಲಿ ಭಾರತ 1-2 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಆದರೆ, ಭಾರತಕ್ಕೆ ಕಂಚು ಗೆಲ್ಲುವ ಅವಕಾಶವಿದ್ದು, ಇನ್ನೊಂದು ಸೆಮಿ ಫೈನಲ್​ನಲ್ಲಿ ಸೋಲುವ ತಂಡದ ವಿರುದ್ಧ ಪಂದ್ಯವಿದೆ. ಇದರಲ್ಲಿ ಭಾರತ ಮಹಿಳಾ ಹಾಕಿ ತಂಡ ಗೆದ್ದರೆ ಕಂಚಿನ ಪದಕ ಮುಡಿಗೇರಿಸಿಕೊಳ್ಳಲಿದೆ.

ಪಂದ್ಯ ಆರಂಭವಾದ ಕೇವಲ ಎರಡು ನಿಮಿಷದಲ್ಲೇ ಭಾರತಕ್ಕೆ ಮೊದಲ ಗೋಲು ದಕ್ಕಿತು. ವಂದನಾ ಅವರು ತಂಡಕ್ಕೆ ಖಾತೆ ತೆರೆದು ಮೊದಲ ಕ್ವಾರ್ಟರ್​ನಲ್ಲಿ ಭಾರತ 1-0 ಮುನ್ನಡೆ ಸಾಧಿಸುವಂತೆ ಮಾಡಿದರು. ಎರಡನೇ ಕ್ವಾರ್ಟರ್​ನ ಆರಂಭದಲ್ಲಿ ಅರ್ಜೇಂಟಿನಾ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡು ತನ್ನ ಖಾತೆ ತೆರೆಯಿತು.

ಮೂರನೇ ಕ್ವಾರ್ಟರ್​ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಂಡ ಅರ್ಜೇಂಟಿನಾ 2-1ರ ಮುನ್ನಡೆ ಸಾಧಿಸಿತು. ಮೂರನೇ ಮತ್ತು ಅಂತಿಮ ನಾಲ್ಕನೆ ಕ್ವಾರ್ಟರ್​ನಲ್ಲಿ ಆಕ್ರಮಣ ಆಟ ಪ್ರದರ್ಶಿಸಿದ ಅರ್ಜೇಂಟಿನಾ ಭಾರತಕ್ಕೆ ಗೋಲು ದಾಖಲಿಸಲು ಅವಕಾಶವೇ ಕೊಡಲಿಲ್ಲ. ಅಂತಿಮವಾಗಿ ಅರ್ಜೇಂಟಿನಾ 2-1 ಗೋಲುಗಳ ಅಂತರದಿಂದ ಗೆದ್ದು ಫೈನಲ್​ಗೆ ಪ್ರವೇಶ ಪಡೆದಿದೆ. ಭಾರತ ಮಹಿಳಾ ಹಾಕಿ ತಂಡದ ಚೊಚ್ಚಲ ಫೈನಲ್ ಕನಸು ಭಗ್ನಗೊಂಡಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');