ಗೋಕಾಕ-ರಾಮದುರ್ಗ ಮಾರ್ಗದಲ್ಲಿ ನೂತನ ಸಾರಿಗೆ ಕಾರ್ಯಾಚರಣೆ

0
🌐 Belgaum News :

ಬೆಳಗಾವಿ, ಆ.04: ಚಿಕ್ಕೋಡಿ ವಿಭಾಗದ ಗೋಕಾಕ ಘಟಕದಿಂದ ಗೋಕಾಕ ರಾಮದುರ್ಗ ಮಾರ್ಗದಲ್ಲಿ ನೂತನ ಸಾರಿಗೆ ಸಂಚಾರÀ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಚಿಕ್ಕೋಡಿ ವಿಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಗೋಕಾಕ ರಾಮದುರ್ಗ ವ್ಹಾಯಾ ಶಿವಾಪೂರ ಕೌಜಲಗಿ ಹುಲಕುಂದ ಸಾಲಳ್ಳಿ ಮಾರ್ಗವಾಗಿ ನೂತನ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ನೂತನ ಸಾರಿಗೆಯ ನಿರ್ಗಮನದ ಸಮಯ ಈ ಕೆಳಗಿನಂತಿವೆ:
ಗೋಕಾಕ್ ನಿಂದ ಬಸ್ ಹೊರಡುವ ಸಮಯ ಬೆಳಿಗ್ಗೆ 8, 10.30, ಮಧ್ಯಾಹ್ನ 1.15, 3.45 ಹಾಗೂ ರಾಮದುರ್ಗ ನಿರ್ಗಮನದ ಬೆಳಿಗ್ಗೆ 10.30, ಮಧ್ಯಾಹ್ನ 1, 00 3.45, ಸಂಜೆ 6.15 ನೂತನ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');