ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆಯವರಿಂದ ದಾಳಿ: ಸಚಿವರಿಗೆ ಸ್ಟಾಲಿನ್ ಪತ್ರ ..!

0
🌐 Belgaum News :

ಚೆನ್ನೈ : ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ  ನೌಕಾಪಡೆ ನಡೆಸಿರುವ ದಾಳಿ ಸಹಿಸಲಾಗದು, ಪದೇ-ಪದೇ ಈ ಕಿರುಕುಳ ನಡೆಯುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್  ಈ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಮಾರ್ಗ ನೀಡಿ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಅವರು  ಪತ್ರ ಬರೆದಿದ್ದಾರೆ.

ಜುಲೈ 28 ರಂದು, 10 ಕೊಡೈಕೆರೈ ಮೀನುಗಾರರು ಮೀನುಗಾರಿಕೆಯ ಉದ್ದೇಶದಿಂದ ಸಮುದ್ರಕ್ಕೆ ತೆರಳಿದ್ದು ಶ್ರೀಲಂಕಾ ನೌಕಾಪಡೆ ತಮಿಳುನಾಡಿನ ಮೀನುಗಾರರ ಮೇಲೆ ದಾಳಿ ನಡೆಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಶಾಶ್ವತ ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸ್ಟಾಲಿನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

ಆಗಸ್ಟ್ 1 ರಂದು, ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಸಮುದ್ರದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಮೀನುಗಾರರಾದ ಕಲೈಸೇಲ್ವನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಮತ್ತು ಅವರನ್ನು ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಕೂಡ ಪತ್ರದಲ್ಲಿ ಹೇಳಲಾಗಿದೆ ಎಂದು ವರದಿ ತಿಳಿಸಿದೆ.

ಇನ್ನು, ಶ್ರೀಲಂಕಾ ನೌಕಾಪಡೆಯವರು ಯಾವುದೇ ವಿದೇಶಿ ನೀತಿ ನಿಯಮಗಳನ್ನು ಪಾಲಿಸುತ್ತಿಲ್ಲ. ಅವ್ಯಾಹತವಾಗಿ ರಾಜ್ಯದ ಮೀನುಗಾರ ಸಮುದಾಯದವರ ಮೇಲೆ ದಾಳಿ ಮಾಡುತ್ತಿರುವುದನ್ನು ನೋಡಿ ಸುಮ್ಮನೆ ಇರುವುದಕ್ಕೆ ಸಾಧ್ಯವಿಲ್ಲ. ಇದಕ್ಕೊಂದು ಶಾಶ್ವತ ಅಂತ್ಯ ಹಾಡಬೇಕಾಗಿದೆ.

ಈ ಘಟನೆ ತಮಿಳುನಾಡಿನ ಮೀನುಗಾರರ ಸಮುದಾಯದವರ ನಿದ್ದೆಗೆಡಿಸಿದ್ದು, ನಮ್ಮ ನೆರೆಯ ದೇಶ ವಿದೇಶಿ ನೀತಿಗಳನ್ನು ಪಾಲಿಸುತ್ತಿಲ್ಲ ಎನ್ನುವುದನ್ನು ನಾವು ಎಚ್ಚರಿಸುವುದು ನಮ್ಮ ಕರ್ತವ್ಯವಾಗಿದೆ. ಕೇಂದ್ರ ಸರ್ಕಾರ  ಈ ಸಮಸ್ಯಗೆ ಶಾಶ್ವತ ಅಂತ್ಯ ಪರಿಹಾರ ಒದಗಿಸಿಕೊಡಬೇಕಿದೆ ಎಂದಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');