ಹುಬ್ಬಳ್ಳಿ ಕಾರಾಗೃಹದಿಂದ ಪರಾರಿಯಾಗಿದ್ದ ಕೈದಿ ಅಣ್ಣಿಗೇರಿ ರೈಲ್ವೆ ನಿಲ್ದಾಣದಲ್ಲಿ ಅನುಮಾಸ್ಪದ ಸಾವು

0
🌐 Belgaum News :

ಹುಬ್ಬಳ್ಳಿ :  ಕೊಲೆ ಆರೋಪದಲ್ಲಿ ಬಂಧಿತನಾಗಿದ್ದ ವಿಚಾರಾಧೀನ ಕೈದಿ ವಿಜಯಾನಂದ ನರೇಗಲ್  ಇಲ್ಲಿನ ಕಾರಾಗೃಹದಿಂದ ಪರಾರಿಯಾಗಿದ್ದವನು, ಅಣ್ಣಿಗೇರಿ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಅನುಮಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾನೆ.

ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2014 ರಂದು ಕುರಿ ಕದಿಯಲು ಹೋಗಿದ್ದ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಇಬ್ಬರು ಕುರಿಗಾಹಿಗಳನ್ನು ವಿಜಯಾನಂದ ಹಾಗೂ ಆತನ ಜೊತೆ ಇನ್ನಿಬ್ಬರು ಸೇರಿ ಕುರಿಗಾಹಿಗಳನ್ನು ಕೊಲೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ 2014 ರಿಂದ ಇಲ್ಲಿನ ಉಪಕಾರಾಗೃದಲ್ಲಿದ್ದ ವಿಜಯಾನಂದ ಆಗಸ್ಟ್ 1 ರಂದು ಅಲ್ಲಿಂದ ಪರಾರಿಯಾಗಿದ್ದ. ಹೈಕೋರ್ಟ್ ನಲ್ಲಿ ಹಾಕಿದ್ದ ಬೆಲ್ ವಜಾ ಆದ ಹಿನ್ನೆಲೆಯಲ್ಲಿ ಭಯಗೊಂಡು ತಪ್ಪಿಸಿಕೊಂಡು ಹೋಗಿ ಅಣ್ಣಿಗೇರಿಗೆ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದನು. ಬಳಿಕ ಏಕಾಏಕಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಹಳಿ ಬಳಿ ಶವ ಪತ್ತೆಯಾಗಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');