ನರ್ಸ್ ಗೆ ಅಶ್ಲೀಲ್ ಮೆಸೆಜ್; ದೇವಗಾಂವ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನನ್ನು ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

0
🌐 Belgaum News :

ಚನ್ನಮ್ಮನ ಕಿತ್ತೂರು: ತಾಲೂಕಿನ ಬೈಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ನರ್ಸ್ ಗೆ ಅಶ್ಲೀಲ ಮೆಸೆಜ್  ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ನರ್ಸ್ ಹಾಗೂ ಸಂಬಂಧಿಕರು ಇಲ್ಲಿನ ದೇವಗಾಂವ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ನರ್ಸ್ ಕಿತ್ತೂರು ಸಮೀಪದ ಬೈಲೂರು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕರ್ತವ್ಯದ ಮೇಲೆ ದೇವಗಾಂವ ಗ್ರಾಮಕ್ಕೂ ತೆರಳುತ್ತಿದ್ದರು. ಈ ವೇಳೆ ಮುಖ್ಯಶಿಕ್ಷಕ ನರ್ಸ ಗೆ ಪರಿಚಯವಾಗಿದ್ದ.

ಕಿತ್ತೂರು ತಾಲೂಕು ಪ್ರಧಾನ ಗುರುಗಳ ಸಂಘದ ಅಧ್ಯಕ್ಷರೂ ಆಗಿರುವ ಮುಖ್ಯಶಿಕ್ಷಕ ಸುರೇಶ ಚವಲಗಿ, ನರ್ಸ್ ಮೊಬೈಲ್ ನಂಬರ್ ಪಡೆದು ಕೆಲ ದಿನಗಳಿಂದ ಅಶ್ಲೀಲ್ ಮೆಸೆಜ್ ಕಳುಹಿಸುತ್ತಿದ್ದ. ಈ ವಿಷಯವನ್ನು ನರ್ಸ್ ತನ್ನ ಸಂಬಂಧಿಕರಿಗೆ ತಿಳಿಸಿದ್ದರು.

ಮುಖ್ಯಶಿಕ್ಷಕನ ವರ್ತನೆಯಿಂದ ಆಕ್ರೋಶಗೊಂಡ ನರ್ಸ್ ಪತಿ ಹಾಗೂ ಸಂಬಂಧಿಕರು ಇಂದು ಶಾಲೆಗೆ ಆಗಮಿಸಿ, ಮುಖ್ಯಶಿಕ್ಷಕನನ್ನು ಹಿಗ್ಗಾಮುಗ್ಗಾ ಥಳಿಸಿದರು. ಅಶ್ಲೀಲ ಪದಗಳಿಂದ ವಾಗ್ದಾಳಿ ನಡೆಸಿದರು.

ಮುಖ್ಯಶಿಕ್ಷಕನನ್ನು ನರ್ಸ್ ಹಾಗೂ ಸಂಬಂಧಿಕರು ಥಳಿಸುತ್ತಿರುವ ವಿಡಿಯೋ ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಕಿತ್ತೂರು ತಾಲೂಕು ಪ್ರಧಾನ ಗುರುಗಳ ಸಂಘದ ಅಧ್ಯಕ್ಷರೂ ಆಗಿರುವ ಮುಖ್ಯಶಿಕ್ಷಕ ಸುರೇಶ ಚವಲಗಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');