ಅಪರಿಚಿತ ವ್ಯಕ್ತಿಯಿಂದ ಮಹಿಳೆಗೆ 19 ಲಕ್ಷ.ರೂ ಪಂಗನಾಮ..!

0
🌐 Belgaum News :

ಉಡುಪಿ : ಫೇಸ್‌ ಬುಕ್‌ ನಲ್ಲಿ ಪರಿಚಯಗೊಂಡ ವ್ಯಕ್ತಿ ಮಹಿಳೆಯನ್ನು ಪುಲಾಯಿಸಿ 19 ಲಕ್ಷ.ರೂ. ಖಾತೆಗೆ ವರ್ಗಾಯಿಸಿಕೊಂಡು ಪಂಗನಾಮ ಹಾಕಿರುವ ಪ್ರಕರಣ ಉಡುಪಿ ಠಾಣೆಯಲ್ಲಿ ದಾಖಲಾಗಿದೆ.

ಲಿನೆಟ್ ಸಿಮಾ ರೊಡ್ರಿಗಸ್‌ (38) ಕುವೈಟ್‌ ದೇಶದಲ್ಲಿ ಉದ್ಯೋಗದಲ್ಲಿದ್ದು ವಂಚನೆ ಒಳಗಾದ ಯುವತಿ,  ಫೇಸ್ ಬುಕ್ ಮೂಲಕ ಆರೋಪಿ ಡಾ. ಆ್ಯಂಡ್ರಿವ್‌ ಫೆಲಿಕ್ಸ್‌ ಎಂಬುವವರ ಪರಿಚಯವಾಗಿದೆ.  ನಾನು  ವೈದ್ಯ ಕಾರ್ಯನಿರ್ವಸುತ್ತಿದ್ದೆನೆ. ಸ್ವಂತ ಆಸ್ಪತ್ರೆ ಕಟ್ಟಬೇಕೆಂಬ ಕನಸಿದೆ, ಆದರೆ. ಸದ್ಯಕ್ಕೆ  ಫಾರ್ಮಸಿ ತೆರೆಯುವ ವಿಚಾರ ಮಾಡಿದ್ದೆನೆ.  ಅದಕ್ಕಾಗಿ 19 ಲಕ್ಷ ರೂ. ಖರ್ಚಾಗುತ್ತದೆ. ನೀವು ಸಹಾಯ ಮಾಡಿದರೆ ಬಂದತಹ ಆದಾಯವನ್ನು ಇಬ್ಬರು ಹಂಚಿಕೊಳ್ಳೋಣ ಎಂದು ಯುವತಿಗೆ ಪುಸಲಾಯಿಸಿ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ.  ಇದಾದ ಕೇಲವೆ ದಿನಗಳಲ್ಲಿ ನಂಬರ್ ಬ್ಯ್ಲಾಕ್ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಮೋಸ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');