ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ರಾಹುಲ್ ಜಾರಕಿಹೊಳಿಯಿಂದ ಧನಸಹಾಯ

0
🌐 Belgaum News :

ಗೋಕಾಕ:  ಅಗಸ್ಟ್ 10 ರಂದು ನೇಪಾಳದಲ್ಲಿ ನಡೆಯಲಿರುವ 19 ವರ್ಷದೊಳಗಿನ ಇಂಡೋ-ನೇಪಾಳ ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟಿರುವ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಧನಸಹಾಯ ಮಾಡಿದರು.

ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ದಡ್ಡಿ ಗ್ರಾಮದ ಸಚೀನ ಅಜೀತ ಸಾಲಗೋಡೆ, ಅಲದಾಳದ ಲಗಮೇಶ ಗಣಪತಿ ಸನದ ಎಂಬ ವಿದ್ಯಾರ್ಥಿಗಳಿಗೆ ರಾಹುಲ್ ಜಾರಕಿಹೊಳಿ ಅವರು ಪ್ರವೇಶ ಶುಲ್ಕ ಹಾಗೂ ಪ್ರಯಾಣ ಖರ್ಚುನ್ನು ನೀಡಿ, ಸಹಾಯ ಒದಗಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ  ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಗೋಕಾಕನ ಹಿಲ್ ಗಾರ್ಡನ್ ಕಚೇರಿಯಲ್ಲಿ ಬುಧವಾರ ರಾಹುಲ್ ಜಾರಕಿಹೊಳಿ ಇಬ್ಬರು ಕ್ರೀಡಾಪಟುಗಳಿಗೆ ಸಹಾಯಧನ ವಿತರಣೆ ಮಾಡಿ, ಪ್ರೋತ್ಸಾಹಿಸಿದರು. ಪಂದ್ಯಾವಳಿಯಲ್ಲಿ ಗೆದ್ದು ಬರುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾರುತಿ ಯಲ್ಲಪ್ಪಾ ಗಸ್ತಿ, ಸುನೀಲ ರಾಯಪ್ಪಾ ನಾಯಕ, ನಾಗೇಂದ್ರ ದುಂಡಪ್ಪಾ ಹತ್ತರಕಿ ಸೇರಿದಂತೆ ಇತರರು ಇದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');