ಶ್ರೀಮಂತ ಪಾಟೀಲರಿಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಕೈಬಿಟ್ಟಿರುವುದಕ್ಕೆ ಅವರ ಬೆಂಬಲಿಗರು ಟಾಯರ್‌ಗೆ ಬೆಂಕಿ ಹಚ್ಚುವದರ ಮೂಲಕ ಪ್ರತಿಭಟನೆ ನಡೆಸಿದರು.

0
🌐 Belgaum News :
ಕಾಗವಾಡ ಶಾಸಕ ಶ್ರೀಮಂತ ಪಾಟೀಲರಿಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಕೈಬಿಟ್ಟಿರುವುದಕ್ಕೆ ಅವರ ಬೆಂಬಲಿಗರು ಟಾಯರ್‌ಗೆ ಬೆಂಕಿ ಹಚ್ಚುವದರ ಮೂಲಕ ಪ್ರತಿಭಟನೆ ನಡೆಸಿದರು.ಬುಧವಾರ ದಿ. ೪ ರಂದು ಇಲ್ಲಿನ ಕಾಗವಾಡ ಚೆನ್ನಮ್ಮ ಸರ್ಕಲ್‌ನಲ್ಲಿ  ಮತಕ್ಷೇತ್ರದ ಸಾವಿರಾರು ಮುಖಂಡರು, ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಜಮಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಕೆಲವು ಸಮಯ ರಸ್ತೆ ತಡೆ ನಡೆಸಿದರು.
ಕಳೆದ ಬಾರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ರಚನೆಗೆ ತಮ್ಮ ಶಾಸಕತ್ವವನ್ನು ತ್ಯಾಗ ಮಾಡಿ ಸರ್ಕಾರ ರಚನೆಗೆ ಮಹತ್ವದ ಪಾತ್ರ ವಹಿಸಿದ್ದ ಶ್ರೀಮಂತ ಪಾಟೀಲರನ್ನು ನೂತನ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ವಲಸೆ ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣಿಕರ್ತರಾಗಿದ್ದರು.ಆ ಸಂದರ್ಭದಲ್ಲಿ ಎಲ್ಲರಿಗೂ ಸಚಿವ ಸ್ಥಾನ ನೀಡುತ್ತೇವೆಂದು ಭರವಸೆ ನೀಡಲಾಗಿತ್ತು. ಆದರೆ ಈಗ ಆ ಭರವಸೆ ಹುಸಿಯಾಗಿರುವುದರಿಂದ ಅನೇಕ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರ ಹಾಕಿದರು.ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದ ೧೭ ಜನರ ಪೈಕಿ ಸರಳ ಸಜ್ಜನ, ರಾಜಕಾರಣಿ ಎಂದೇ ಖ್ಯಾತರಾಗಿರುವ ಶ್ರೀಮಂತ ಪಾಟೀಲರನ್ನು ಕೈಬಿಟ್ಟಿರುವುದಕ್ಕೆ ಕ್ಷೇತ್ರದ ಮತದಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವು ಕಾಣಬಹುದಾಗಿದೆ.
ಯುವ ಮುಖಂಡ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡಿ ಕಳೆದ ಒಂದುವರೆ ವರ್ಷಗಳ ಕಾಲ ಅಲ್ಪಸಂಖ್ಯಾತರ ಸಚಿವರಾಗಿ ಸಾವಿರಾರು ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಿದರು. ನ್ಯಾಯವಾದಿ ಅಭಯಕುಮಾರ ಅಕಿವಾಟೆ ಮಾತನಾಡಿ ಕಾಗವಾಡ ಮತಕ್ಷೇತ್ರವು ಶ್ರೀಮಂತ ಪಾಟೀಲರ ಅಧಿಕಾರವಧಿಯಲ್ಲಿ ಎಂದು ಕಾಣದೇ ಇರುವಂತಹ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ಶ್ರೀಮಂತ ಪಾಟೀಲರನ್ನು ಕೈಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಆದಷ್ಟು ಬೇಗನೆ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸಿಕೊಳ್ಳುವಂತೆ ಆಗ್ರಹಿಸಿದರು.
ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ಅವರಿಗೆ ಮನವಿ ಪತ್ರ ಅರ್ಪಿಸಲಾಯಿತು.
ಈ ಸಮಯದಲ್ಲಿ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ, ನ್ಯಾಯವಾದಿ ಅಭಯಕುಮಾರ ಅಕಿವಾಟೆ,   ದಾದಾ ಪಾಟೀಲ, ಆರ್.ಎಂ.ಪಾಟೀಲ, ಸಚೀನ ಕವಟಗೆ, ವಿನೋದ ದೇವನೆ, ಸುಭಾಷ ಕಟಾರೆ, ಬಾಳಗೌಡ ಪಾಟೀಲ, ರಾಜು ನಾಂದ್ರೆ, ಭರತ ಪಾಟೀಲ, ಸಚೀನ ಕಾಂಬಳೆ, ಅಪ್ಪಾಸಾಬ ಚೌಗಲೆ, ವಿಜಯ ಸಿಂಧೆ, ಸಂಭಾಜಿ ಪವಾರ, ಈಶ್ವರ ಕುಂಬಾರೆ, ಮುರಗೆಪ್ಪ ಮಗದುಮ, ಜಯಪಾಲ ಯರಂಡೋಲಿ ಸೇರಿದಂತೆ ಕಾಗವಾಡ ಮತಕ್ಷೇತ್ರದ ಎಲ್ಲ ಗ್ರಾಮಗಳಿಂದ ಶ್ರೀಮಂತ ಪಾಟೀಲ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');