ನಾಗನೂರಿನಲ್ಲಿ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಚಾಲನೆ

0
🌐 Belgaum News :

ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬುಧವಾರ ಮಹಿಳಾ ಕಾಯಕೋತ್ಸವ ಅಭಿಯಾನ” ಕ್ಕೆ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯತ ಅಧ್ಯಕ್ಷ ಬಸವಣ್ಣೆವ್ವ ಸಣ್ಣಮನಿ ಯೋಜನೆಯ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಉಪಸ್ಥಿತಿ ತಾಲೂಕ ಪಂಚಾಯತ ನರೇಗಾ ಐಇಸಿ ಸಂಯೋಜಕರು ಎಸ್ ವ್ಹಿ ಹಿರೇಮಠ, ಗ್ರಾಪಂ ಉಪಾಧ್ಯಕ್ಷ್ಯೆ ಮಹಾದೇವಿ ಕಾಡಣ್ಣವರ, ಸದಸ್ಯರಾದ ಶೋಭಾ ಪಾಟೀಲ ಮಮತಾಜ, ನದಾಫ ಹೊಸಮನಿ, ಅನ್ನವ್ವ ಪೂಜೇರಿ, ಸಂಜು ಹೊಸಮನಿ, ಕ್ಲರ್ಕ ಸುನೀಲ ತಲ್ಲೂರ, ಸುಪ್ರೀತಾ ಪಾಟೀಲ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಸ್ವಸಹಾಯ ಸಂಘದ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.
ನರೇಗಾ ತಾಲೂಕ ಐಇಸಿ ಸಂಯೋಜಕರು ಎಸ್ ವ್ಹಿ ಹಿರೇಮಠ ಮಾತನಾಡಿ ಇದು ಜುಲೈ-15-2021 ರಿಂದ ಸೆಪ್ಟಂಬರ-15-2021 ರವರೆಗೆ ಅಭಿಯಾನದ ರೂಪದಲ್ಲಿ ತಾಲೂಕಿನ ಆಯ್ದ ಗ್ರಾಮ ಪಂಚಾಯತಿಗಲ್ಲಿ ಜರುಗುತ್ತಿದ್ದು ಮತ್ತು ಇದರ ಮುಖ್ಯ ಉದ್ದೇಶ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳಾ ಕೂಲಿಕಾರರು ಅತಿ ಹೆಚ್ಚಿನ ಪ್ರಮಾಣದಲ್ಲ ಪಾಲ್ಗೋಳ್ಳುವುದಾಗಿದೆ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಯರು ಬರಬೇಕು, ಆರ್ಥಿಕವಾಗಿ ಸದೃಡರಾಗಲು ನರೇಗಾ ಯೋಜನೆಯು ಒಂದು ಆರ್ಥಿಕ ವರ್ಷದಲ್ಲಿ 100 ದಿವಸ ಕೆಲಸವನ್ನು ಪ್ರತಿ ಕುಟುಂಬಕ್ಕೆ ನೀಡುತ್ತದೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಕ್ಲರ್ಕ ಸಂಜು ಹೊಸಮನಿ ಸ್ವಾಗತಿಸಿ, ವಂದಿಸಿದರು.

 

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');