ರಾಜ್ಯದ 13 ಜಿಲ್ಲೆಗಿಲ್ಲ ಪ್ರಾತಿನಿಧ್ಯ : ಬೆಳಗಾವಿಯ ಇಬ್ಬರಿಗೆ ಸಚಿವ ಸ್ಥಾನ

0
🌐 Belgaum News :

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಸಂಪುಟದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿವೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಶಾಸಕರಿಗೆ ಬೀಗ್ ಶಾಕ್ ಆಗಿದ್ದು, ರಾಜ್ಯದ 13 ಜಿಲ್ಲೆಗೆ ಪಾತಿನಿಧ್ಯ ನೀಡಿಲ್ಲ. 6 ಜಿಲ್ಲೆಗಳಿಗೆ ಬಂಪರ್ ಲಾಟ್ರಿ ಹೊಡೆದಂತಾಗಿದೆ.

ಕಲಬುರಗಿ, ಮೈಸೂರು, ವಿಜಯಪುರ, ಕೊಡಗು, ಕೋಲಾರ, ಯಾದಗಿರಿ, ರಾಮನಗರ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಸೇರಿ ಒಟ್ಟು 13 ಜಿಲ್ಲೆಗಳಿಗೆ ಸಚಿವ ಸ್ಥಾನಗಳನ್ನು ನೀಡಲಾಗಿಲ್ಲ. ಇದರಿಂದ ಆಯಾ ಜಿಲ್ಲೆಯ ನಾಯಕರು ಅಸಮಾಧಾನಗೊಂಡಿದ್ದಾರೆ.

ಇನ್ನೂ ರಾಜ್ಯದ ಆರು ಜಿಲ್ಲೆಗಳಾದ ಬೆಳಗಾವಿ, ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಿಗೆ ಎರಡು ಮೂರು ಸಚಿವ ಸ್ಥಾನಗಳು ದೊರೆತಿವೆ.

ಬೆಳಗಾವಿಯ ಇಬ್ಬರಿಗೆ ಸ್ಥಾನ :  ಮಾಜಿ ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಹೆಚ್ಚು ಸಚಿವ ಸ್ಥಾನಗಳು ಜಿಲ್ಲೆಗೆ ದೊರೆತಿದ್ದವು. ಆದ್ರೆ ಈ ಬಾರಿ ಬೊಮ್ಮಾಯಿಸಂಪುಟದಲ್ಲಿ  ಉಮೇಶ ಕತ್ತಿ, ಶಶಿಕಲಾ ಜೊಲ್ಲೆ ಅವರಿಗೆ ಮಾತ್ರ ಸಚಿವ ಸ್ಥಾನ ದೊರೆತಿವೆ.

ಲಕ್ಷ್ಮಣ ಸವದಿ, ಅಭಯ ಪಾಟೀಲ, ಪಿ.ರಾಜೀವ ಅವರಿಗೆ ಸ್ಥಾನ ಸಿಗಲಿವೆ ಎಂಬ ನಿರೀಕ್ಷೆ ಇತ್ತು. ಆನಂದ ಮಾಮನಿ ಸಚಿವಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ ಇವರಿಗೆ ಯಾರಿಗೆ ಸ್ಥಾನ ಸಿಗದೆ ಇರುವುದು ಅವರ ಅಭಿಮಾನಿಗಳ ನಿರೀಕ್ಷೆಗೆ ತಣ್ಣಿರು ಎರಚಿದಂತಾಗಿದೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');