ಆರೋಗ್ಯ ಉಪಕೇಂದ್ರದ ಮೇಲ್ಛಾವಣಿ ಕುಸಿತ; ಇಬ್ಬರು ಆರೋಗ್ಯ ಸಿಬ್ಬಂದಿಗೆ ಗಾಯ

0
🌐 Belgaum News :

ಯಾದಗಿರಿ: ಆರೋಗ್ಯ ಉಪಕೇಂದ್ರದ ಮೇಲ್ಛಾವಣಿ ಏಕಾಏಕಿ ಕುಸಿತಗೊಂಡಿದ್ದರಿಂದ ಇಬ್ಬರು ಆರೋಗ್ಯ ಸಿಬ್ಬಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದಲ್ಲಿರುವ ಉಪ ಆರೋಗ್ಯ ಕೇಂದ್ರದ ಕಟ್ಟಡ ಸುಮಾರು 40 ವರ್ಷ ಹಳೆಯದಾಗಿದ್ದು, ಅದರಲ್ಲೇ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ರಿಪೇರಿ ಮಾಡಿಸುವಂತೆ ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ಸಿಬ್ಬಂದಿ ತಂದಿದ್ದರೂ ಪ್ರಯೋಜವಾಗಿರಲಿಲ್ಲ. ಆದರೆ ಇಂದು ಕುಸಿತಕ್ಕೊಳಗಾಗಿ ಅನಾಹುತ ಸಂಭವಿಸಿದೆ.

ಇಂದು ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಾಗೇಶ್ ಹಾಗೂ ಸುನೀತಾ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿತಗೊಂಡಿದೆ. ಸಕಾಲಕ್ಕೆ ಸ್ಥಳೀಯರು ಬಂದು ಇಬ್ಬರನ್ನೂ ಕಾಪಾಡಿದ್ದಾರೆ. ಇಬ್ಬರಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂದಲೆಳೆಯ ಅಂತರದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');