ವರದಕ್ಷಿಣೆ ಕಿರುಕುಳಕ್ಕೆ ಬೆಸತ್ತು ನದಿಗೆ ಹಾರಿ ಯುವತಿ ಆತ್ಮಹತ್ಯೆ

0
🌐 Belgaum News :

ಹಾಸನ: ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ನಿವಾಸಿ ಪೂಜಾ (20) ಮೃತ ದುರ್ದೈವಿ.  ಮೃತ ಪೂಜಾ ಪೋಷಕರ ವಿರೋಧದ ನಡುವೆಯೂ ಸಕಲೇಶಪುರದ ಅಶ್ವತ್ಥ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು.

ಯುವತಿ ಆಸ್ತಿ ಮೇಲೆ ಕಣ್ಣು ಹಾಕಿ, ಪೊಷಕರಿಗೆ ಚಾಲೆಂಜ್ ಮಾಡಿದ ಯುವಕ: ಮಗಳನ್ನು ಪ್ರೀತಿಸುವ ವಿಷಯ ನಮಗೆ ಗೊತ್ತು, ನಮ್ಮ ಮಗಳನ್ನು ದಯವಿಟ್ಟು ಬಿಟ್ಟು ಬೀಡು ಎಂದು ಯುವತಿ ತಂದೆ ಯುವಕ ಮುಂದೆ ಗೋಗರೆದಿದ್ದಾರೆ. ಈ ವೇಳೆ ಯುವಕ ಪೋಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮ ಆಸ್ತಿ ಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಒಪ್ಪದ ತಂದೆ ಸುಮ್ಮನ್ನಾಗಿದ್ದಾರೆ. ಇದಾದ ಬಳಿಕ ಮಗಳಿಗೆ ತಂದೆ ತಿಳಿ ಹೇಳಿದ್ದಾರೆ.

ಅಶ್ವತ್ಥ್ ನಿನ್ನ ನಿಜವಾಗಿ ಪ್ರೀತಿ ಮಾಡುತ್ತಿಲ್ಲ. ನಮ್ಮ ಆಸ್ತಿ ಕಣ್ಣು ಹಾಕಿದ್ದಾನೆ ದಯವಿಟ್ಟು ಅವನ ಜತೆ ಸಲುಗೆಯಿಂದ ಮಾತನಾಡಬೇಡ ತಂದೆ ಎಚ್ಚರಿಕೆ ನೀಡಿದ್ದಾರೆ. ಈ ಮಾತನ್ನು ನಂಬದ ಯುವತಿ ಪೊಷಕರ ವಿರೋಧದ ನಡುವೆ ಪ್ರಿಯಕರನ್ನು ಕೈ ಹಿಡಿದ್ದಾಳೆ. ಇದಾದ ಕೆಲವೇ ದಿನಗಳಲ್ಲಿ ಯುವಕ ಕುಟುಂಬಸ್ಥರು ವರದಕ್ಷಿಣೆ ತರುವಂತೆ  ಯುವತಿಗೆ ಕಿರುಕುಳ ನೀಡಿದ್ದಾರೆ. ತಂದೆ ಮಾತನ್ನು ಅಲಗೆಳದ ಯುವತಿ ಬಾರದ ಲೋಕಕ್ಕೆ ತೆರಳಿದ್ದಾಳೆ.

ಸಕಲೇಶಪುರ ನಗರಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');