ನೆರೆ ವೀಕ್ಷಣೆಗೆ ತೆರಳಿದ್ದ ಗೃಹ ಸಚಿವ ಪ್ರವಾಹದಲ್ಲಿ ಸಿಲುಕಿ ಪರದಾಟ; ಏರ್‌ಲಿಫ್ಟ್‌ನಿಂದ ರಕ್ಷಣೆ

0
🌐 Belgaum News :

ಭೋಪಾಲ್: ಪ್ರವಾಹದಲ್ಲಿ ಸಿಲುಕಿದ್ದ ಮಧ್ಯಪ್ರದೇಶದ ಗೃಹ ಸಚಿವ ನಾರೋತ್ತಮ್ ಮಿಶ್ರಾ ಅವರನ್ನು ಭಾರತೀಯ ವಾಯು ಸೇನೆ ಯೋಧರು ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್‌ ಮಾಡಿ ರಕ್ಷಿಸಿದ್ದಾರೆ.

ಮಧ್ಯ ಪ್ರದೇಶದ ದಟಿಯಾ ಜಿಲ್ಲೆಯ ಕೊಟ್ರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರವಾಹ ವೀಕ್ಷಣೆಗೆಂದು ಸಚಿವ ಮಿಶ್ರಾ ಅವರು ಎಸ್‍ಡಿಆರ್ ಎಫ್ ನ ಮೋಟರ್ ಬೋಟ್‍ನಲ್ಲಿ ತೆರಳಿದ್ದರು. ಈ ವೇಳೆ ಬೋಟ್ ಬೃಹತ್ ಮರದಲ್ಲಿ ಸಿಲುಕಿದೆ. ಬಳಿಕ ಸಚಿವರು ಎಸ್‍ಡಿಆರ್ ಎಫ್ ರಕ್ಷಣಾ ತಂಡದ ನಾಲ್ವರು ಮಹಿಳೆಯರೂ ಸೇರಿ 9 ಮಂದಿ ಜೊತೆ ಪಂಚಾಯಿತಿ ಕಟ್ಟಡಕ್ಕೆ ತೆರಳಿದ್ದಾರೆ.

ಹೆಲಿಕಾಪ್ಟರ್ ಮೂಲಕ ಮೊದಲು ಪಂಚಾಯತ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದ್ದು, ಬಳಿಕ ಮಿಶ್ರಾ ಅವರನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ದಟಿಯಾದಲ್ಲಿರುವ ಅವರ ಮನೆಗೆ ತಲುಪಿಸಲಾಗಿದೆ. ಈ ಮೂಲಕ ನೆರೆ ವೀಕ್ಷಣೆಗೆ ತೆರಳಿದ ಸಚಿವರೇ ಪ್ರವಾಹದಲ್ಲಿ ಸಿಲುಕಿ ಪರದಾಡಿರುವ ಘಟನೆ ನಡೆದಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');