ಹೆತ್ತ ತಾಯಿಯನ್ನು ಬಿಟ್ಟು ಹೊರಟ ಮಗನಿಗೆ ಧರ್ಮದ ಏಟು

0
🌐 Belgaum News :

ಒಂಭತ್ತು ತಿಂಗಳು ಹೊತ್ತು ಹೆತ್ತ ತಾಯಿಯನ್ನು ಅವಳ ಒಬ್ಬನೆ ಮಗ ಅನಾರೋಗ್ಯದ ನೆಪದಿಂದ ಬೀದಿಯಲ್ಲಿ ಬಿಟ್ಟು ಹೊರಟ ವಿಷಯ ತಿಳಿದು ಸಾರ್ವಜನಿಕರು ಧರ್ಮದ ಏಟು ನೀಡಿ ಪೋಲಿಸರಿಗೆ ಒಪ್ಪಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ತನ್ನ ಮಕ್ಕಳು ಕಳ್ಳರಾದರೂ,ಸುಳ್ಳರಾದರೂ,ಕುಡುಕರಾದರೂ ಸಹಿಸಿಕೊಳ್ಳುವ ಸಹನಾಮಯಿ ಅಮ್ಮನನ್ನ ಅವಳ ಮಗನೆ ಅನಾಥವಾಗಿಸ ಹೊರಟಿದ್ದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವಂತೆ ತನ್ನ ಮಗನನ್ನು ಜನರು ಹೊಡೆಯುವದನ್ನು ನೋಡಿ ತಾಯಿ ಬಿಟ್ಟುಬಿಡುವಂತೆ ಕಣ್ಣೀರು ಹಾಕಿದ್ದು ನೆರೆದಿದ್ದ ಜನರ ಕರುಳು ಹಿಂಡುವ ಸಮಯ ಅದಾಗಿದ್ದು ಹೆತ್ತ ತಾಯಿಯನ್ನು ಬಿಟ್ಟು ಹೊರಟ ಮಗನಿಗೆ  ಜನ್ಮಕ್ಕೆ ಸಿಗುವದು ಒಬ್ಬಳೇ ತಾಯಿ, ಒಂದು ಸಲ ತಾಯಿಯನ್ನು ಕಳೆದುಕೊಂಡರೆ ಮರಳಿ ಬರಲಾರಳು ಎಂದು ಜನರೇ ಬುದ್ದಿ ಹೇಳಿದ್ದಾರೆ.

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಅನ್ನುವ ಮಾತನ್ನು ಹೆಳಿದರು ಕೂಡ ತಾಯಿಯನ್ನು ಬಿಟ್ಟು ಹೊರಟಿದ್ದ ಮಗನಿಗೆ ಜನರು ಧರ್ಮದ ಏಟು ಕೊಡುವ ಮೂಲಕ ಬುದ್ದಿ ಹೇಳಿದ್ದಾರೆ ನಾಗರಿಕ ಸಮಾಜದಲ್ಲಿ ಈ ಮನಃ ಕಲಕುವ ಘಟನೆ ಜರುಗಿದ್ದು
ಶ್ರೀಧರ ರಮೇಶ ಸೊಳಸಿ ಎಂಬ ಯುವಕ ಪುಣೆಯಲ್ಲಿ ಎಲ್ ಎಲ್ ಬಿ ಪದವೀಧರನಾಗಿದ್ದಾನೆ ಎಂದು ತಿಳಿದು ಬಂದಿದೆ.

ತನ್ನ  ತಾಯಿಗೆ ಕ್ಯಾನ್ಸರ್ ಖಾಯಿಲೆ ಇದ್ದುದ್ದರಿಂದ ಅಥಣಿಯ ಸಂಬಂಧಿಕರ ಮನೆಗೆ ಹೋಗೋಣ ಎಂದು ಪುಸಲಾಯಿಸಿ ಕರೆದುಕೊಂಡು ಬಂದು ಅಥಣಿಯ ಸಾರ್ವಜನಿಕ ಆಸ್ಪತ್ರೆ ಹತ್ತಿರ ಬಿಟ್ಟು ಹೋಗುವಾಗ ಸಂಶಯ ಬಂದ ಸಾರ್ವಜನಿಕರು ಕರೆದು ವಿಚಾರಿಸಿದ್ದು  ತಾಯಿಯನ್ನು ಬಿಟ್ಟು ಹೋಗುತ್ತಿರುವ ವಿಷಯ ತಿಳಿದು ಬುದ್ದಿಪಾಠ ಕಲಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದರು. ಅಥಣಿ ಪೋಲಿಸ್ ಠಾಣೆಯಲ್ಲಿ ಸಿ.ಪಿ.ಐ ಶಂಕರಗೌಡ ಬಸನಗೌಡ ಅವರು ಆ ಮಹಿಳೆಯ ಮಗನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಮನಗನಿಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');