ಮಹೇಶ್ ಕುಮಠಳ್ಳಿಗೆ ಸಚೀವ ಸ್ಥಾನ ಕೊಡಿ ಡಾಕ್ಟರ್ ಸೌದಾಗರ ಆಗ್ರಹ

0
🌐 Belgaum News :
ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ ಅನ್ನಿಸಿಕೊಂಡ ಬಿ ಎಸ್ ವೈ ರಾಜಿನಾಮೆ ಪ್ರಹಸನದ ಬಳಿಕ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದು ಅವರ ಸಚೀವ ಸಂಪುಟದಲ್ಲಿ
ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಹೇಶ್ ಕುಮಠಳ್ಳಿ ಅಭಿಮಾನಿಗಳು ತಮ್ಮ ಅಸಮಾಧಾನ ಹೋರಹಾಕಿದ್ದಾರೆ
ಅಥಣಿ ಪಟ್ಟಣದ ಡಾ” ಅನೀಲ ಸೌದಾಗರ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಮಹೇಶ ಕುಮಠಳ್ಳಿ ಅಭಿಮಾನಿಗಳು ಮಾತನಾಡಿ ಉಪ ಚುನಾವಣೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನವರು ಮಹೇಶ್ ಕುಮಠಳ್ಳಿ ಅವರನ್ನ ಮಂತ್ರಿ ಮಾಡುವ ಭರವಸೆ ನೀಡಿದ್ದರು ಇನ್ನೂ ಲಕ್ಷ್ಮಣ ಸವದಿ ಅವರು ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಾರೆಂದು ಮಾತು
 ಕೊಟ್ಟಿದ್ದರು ಆದರೆ ಇದುವರೆಗೂ ಕುಮಠಳ್ಳಿ ಅವರನ್ನ ಮಂತ್ರಿ ಮಾಡಿಲ್ಲ ಅಷ್ಟೆ ಅಲ್ಲದೆ ಮಾಜಿ ಸಾರಿಗೆ ಸಚೀವರಾಗಿದ್ದ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನ ಸಚಿವ ಸಂಪುಟದಿಂದ ಕೈ ಬಿಡಲಾಗಿದೆ ಇದು ಸರಿಯಲ್ಲ.ಬಿಜೆಪಿ ಹೈ ಕಮಾಂಡ್ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಅಥಣಿ ಉಪಚುನಾವಣೆಯ ವೇಳೆ ಅಥಣಿ ಮತ್ತು ಕಾಗವಾಡ ಮತಕ್ಷೇತ್ರದ ಶಾಸಕರಾಗಿ ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಠಳ್ಳಿ ಅವರನ್ನು ಜೋಡೆತ್ತುಗಳಾಗಿ ಗೆಲ್ಲಿಸಿ ಹೆಗಲ ಮೇಲೆ ಹೊತ್ತು ತರುವ ಮಾತು ಕೊಟ್ಟು ನುಡಿದಂತೆ ನಡೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಸಚೀವ ಸಂಪುಟದಿಂದ ಕೈಬಿಟ್ಟಿರುವದು ಸರಿ ಅಲ್ಲ
ಬಸವರಾಜ ಬೊಮ್ಮಾಯಿ ಅವರ ಮಂಡಲದಲ್ಲಿ ಬಿಜೆಪಿ ಸರ್ಕಾರ ರಚನೆಯ ವೇಳೆ ಮತ್ತು ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾಂದಿ ಹಾಡಿ ಬಿ ಎಸ್ ವೈ ಅವರನ್ನು ಮುಖ್ಯಮಂತ್ರಿ ಮಾಡಲು ಕಾರಣಿಭೂತರಾದ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು
 ಇನ್ನೂ ಕೂ ಕಾಲ ಮಿಂಚಿಲ್ಲ ಬಾಕಿ ಉಳಿದಿರುವ ನಾಲ್ಕು ಸಚೀವ ಸ್ಥಾನಗಳಲ್ಲಿ ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರಲ್ಲದೆ ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟದ ಹಾದಿ ಹಿಡಿಯುವುದಾಗಿ ಡಾಕ್ಟರ್ ಅನಿಲ್ ಸೌದಾಗರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು
ಈ ವೇಳೆ ಮಹೆಶ್ ಕುಮಠಳ್ಳಿ ಅಭಿಮಾನಿ ಬಳಗದ ದೀಲಿಪ ಕಾಂಬಳೆ, ಸುಂದರ್ ಸೌದಾಗರ, ಮಲ್ಲಿಕಾರ್ಜುನ ಅಂದಾನಿ, ಅಪ್ಪು ಪಾಟೀಲ,ಅಣ್ಣಪ್ಪ ವಾಜಂತ್ರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');