ಅಥಣಿಯಲ್ಲಿ ಸಾರಿಗೆ ಆಯುಕ್ತ ಭೀಮನಗೌಡ ಪಾಟೀಲಗೆ ಬೀಳ್ಕೊಡುಗೆ

0
🌐 Belgaum News :
ಅಥಣಿ: ಚಿಕ್ಕೋಡಿ ಮತ್ತು ಅಥಣಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಜಿ ಪಿ ವಿಶಾಲ ಪದಗ್ರಹಣ ಮಾಡಿದರು. ಈ ಮೊದಲು ಅಥಣಿ ಹಾಗೂ ಚಿಕ್ಕೋಡಿಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಭೀಮನಗೌಡ ಪಾಟೀಲ ಪದೊನ್ನತಿ ಹೊಂದಿ ಉಪ ಸಾರಿಗೆ ಆಯುಕ್ತರಾಗಿ ಮೈಸೂರಿಗೆ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದಾರೆ.ಈ ವೇಳೆ ಅಥಣಿ-ಗೊಕಾಕ ರಸ್ತೆಯಲ್ಲಿ ಇರುವ ಸಾರಿಗೆ ಕಚೇರಿಯಲ್ಲಿ ಬೀಳ್ಕೊಡುಗೆ ಹಾಗೂ ಸ್ವಾಗತ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಮೈಸೂರಿಗೆ ಸಾರಿಗೆ ಉಪ ಆಯುಕ್ತರಾಗಿ ಪದೊನ್ನತಿ ಹೊಂದಿದ ಬೀಮನಗೌಡ ಪಾಟೀಲ  ಕಳೆದ ಮೂರು ವರ್ಷಗಳಿಂದ ಚಿಕ್ಕೋಡಿ ಕಚೇರಿಯಲ್ಲಿ ತಾವು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ವರ್ಗಾವಣೆ ಮತ್ತು ಪದೊನ್ನತಿಗಳು ಸರ್ಕಾರಿ ನೌಕರಿಯಲ್ಲಿ ಸಹಜ ಆದರೆ ಕರ್ತವ್ಯ ನೀರ್ವಹಿಸುವ ಸಮಯದಲ್ಲಿ ನಾವು ಯಾರೊಂದಿಗೆ ಹೇಗೆ ಇದ್ದೆವು ನಮ್ಮ ಜವಾಬ್ದಾರಿಯನ್ನು ಹೇಗೆ ನಿಭಾಯಿಸಿದೆವು ಎನ್ನುವದು ಮುಖ್ಯವಾಗುತ್ತದೆ.
ಅಥಣಿ ಮತ್ತು ಚಿಕ್ಕೋಡಿ ಕಚೇರಿಗಳಲ್ಲಿ ನನಗೆ ನೀಡಿದ ಸಹಾಯ ಸಹಕಾರವನ್ನು ನಾನು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಪದೊನ್ನತಿ ಹೊಂದಿ ನಾನು ಮೈಸೂರಿಗೆ ಹೋಗುತ್ತಿದ್ದು ನನ್ನ ಸ್ಥಾನಕ್ಕೆ ಬಂದಿರುವ ಜಿ ಪಿ ವಿಶಾಲ ಅವರಿಗೂ ಇದೇ ರೀತಿ ಸಹಾಯ ಸಹಕಾರ ನಿಮ್ಮಿಂದ ಸಿಗಲಿ ಎಂದು ಆಶಿಸುತ್ತೇನೆ ಎಂದರು.
ಇನ್ನು ಭೀಮನಗೌಡ ಪಾಟೀಲ ಅವರ ಸ್ಥಾನಕ್ಕೆ ಬಂದಿರುವ ಜಿ ಪಿ ವಿಶಾಲ ಮಾತನಾಡಿ ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಭೀಮನಗೌಡ ಪಾಟೀಲರ ಬಗ್ಗೆ ನಿಮ್ಮ ಅಭಿಮಾನ ಅವರ ಕಾರ್ಯ ವೈಖರಿಯನ್ನು ತಿಳಿಸುತ್ತದೆ.ಸದ್ಯ ನನ್ನನ್ನು ಸ್ವಾಗತಿಸಿದ ರೀತಿಯನ್ನು ನೋಡಿ ಇಲ್ಲಿ ಕರ್ತವ್ಯ ನೀರ್ವಹಿಸಲು ನನ್ನಲ್ಲಿ ಹುಮ್ಮಸ್ಸು ಹೆಚ್ಚಾಗಿದೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದ ಭೀಮನಗೌಡ ಪಾಟೀಲ ಅವರು ಮೈಸೂರಿಗೆ ಪದೊನ್ನತಿ ಹೊಂದಿ ಉಪ ಸಾರಿಗೆ ಆಯುಕ್ತರಾಗಿ ತೆರಳುತ್ತಿದ್ದು ಅವರ ಮುಂದಿನ ಜೀವನ ಸುಖ ಸಂತೋಷ ಮತ್ತು ನೆಮ್ಮದಿಯಿಂದ ಕೂಡಿರಲಿ ಮತ್ತೆ  ಅವರಿಗೆ ಪದೊನ್ನತಿಗಳು ಒಲಿದು ಬರಲಿ ಎಂದು ಆಶಿಸುತ್ತೇನೆ ಎಂದರು.
ಈ ವೇಳೆ ಸಾರ್ವಜನಿಕರಿಂದ ಅಥಣಿ ತಾಲೂಕು ದೊಡ್ಡದಾಗಿದ್ದು ರಾಯಭಾಗ ತಾಲೂನಿಂದಲೂ ಜನರು ಇಲ್ಲಿ ತಮ್ಮ ಕೆಲಸಕ್ಕೆ ಆಗಮಿಸುವದರಿಂದ ಕೆಲಸದ ಒತ್ತಡ ಹೆಚ್ಚುತ್ತಿದ್ದು ಹೆಚ್ಚುವರಿ ಸಿಬ್ಬಂದಿಯ ನೇಮಕ ಮಾಡುವದರ ಜೊತಗೆ ಸಾರಿಗೆ ಕಚೇರಿಗೆ ಪ್ರಭಾರಿ ಅಧಿಕಾರಿಗಳ ಬದಲು ಖಾಯಂ ಅಧಿಕಾರಿಯ ನೇಮಕ ಮಾಡಬೇಕು ಎಂಬ ಆಗ್ರಹಗಳು ಕೇಳಿಬಂದವು.
ಈ ಸಂಧರ್ಭದಲ್ಲಿ ಎಸ್. ಜಿ ಜೋಶಿ, ಆರ್. ಎ ಬಡಚಿ, ವಿ. ಪಿ ಮಾದರ, ಕೆ.ಎಸ್ ಬೆಂಡಿಗೇರಿ, ಡ್ರಾವೀಗ್ ಸ್ಕೂಲ್ ಸಿಬ್ಬಂದಿಗಳಾದ ಶಂಕರ ದೇಸಾಯಿ, ಮುರಗೆಪ್ಪಾ ಮೋಟಗಿ, ಓಂ ಪ್ರಕಾಶ ಪಾಟೀಲ, ಸಿದ್ದು ಹಂಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');