ಬಿಜೆಪಿ ಸರ್ಕಾರ ರಚನೆಗೆ ಕಾರಣಿಕರ್ತರಾದ 17 ಜನರ ಪೈಕಿ ಸರಳ ಸಜ್ಜನ, ರಾಜಕಾರಣಿ ಎಂದೇ ಖ್ಯಾತರಾಗಿರುವ ಶ್ರೀಮಂತ ಪಾಟೀಲರನ್ನುಸಚಿವ ಸಂಪುಟದಲ್ಲಿ ಕೈ ಕೈಬಿಟ್ಟಿರುವುದಕ್ಕೆ ಕ್ಷೇತ್ರದ ಜನತೆಗೆ ಮೋಸ ;ಥೋರುಸೆ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

0
🌐 Belgaum News :

ಶೇಡಬಾಳ :- ಬಿಜೆಪಿ ಸರ್ಕಾರ ರಚನೆಗೆ ಕಾರಣಿಕರ್ತರಾದ 17 ಜನರ ಪೈಕಿ ಸರಳ ಸಜ್ಜನ, ರಾಜಕಾರಣಿ ಎಂದೇ ಖ್ಯಾತರಾಗಿರುವ ಶ್ರೀಮಂತ ಪಾಟೀಲರನ್ನುಸಚಿವ ಸಂಪುಟದಲ್ಲಿ ಕೈ ಕೈಬಿಟ್ಟಿರುವುದಕ್ಕೆ ಕ್ಷೇತ್ರದ ಜನತೆಗೆ ಮೋಸ ಮಾಡಿದಂತಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಪುರಸಭೆ ಸದಸ್ಯ ಪ್ರಫುಲ ಥೋರುಸೆ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಗುರುವಾರ ದಿ. 5 ರಂದು ಉಗಾರ ಪಟ್ಟಣದ ಪರಸಪ್ಪ ಕಾರ್ನರದಲ್ಲಿ ಪಟ್ಟಣದ ಹಲಾವಾರು ಮುಖಂಡರು, ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಜಮಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಕೆಲವು ಸಮಯ ರಸ್ತೆ ತಡೆ ನಡೆಸಿದರು.

ಕಳೆದ ಬಾರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ರಚನೆಗೆ ತಮ್ಮ ಶಾಸಕತ್ವವನ್ನು ತ್ಯಾಗ ಮಾಡಿ ಸರ್ಕಾರ ರಚನೆಗೆ ಮಹತ್ವದ ಪಾತ್ರ ವಹಿಸಿದ್ದ ಶ್ರೀಮಂತ ಪಾಟೀಲರನ್ನು ನೂತನ ಸಂಪುಟದಿಂದ ಕೈಬಿಟ್ಟಿರುವುದು ಖಂಡನೀಯ. ತಕ್ಷಣವೇ ಅವರನ್ನು ಮಂತ್ರಿ ಮಂಡಳಕ್ಕೆ ಸೇರ್ಪಡೆ ಮಾಡಬೇಕೇಂದು ಪ್ರಫುಲ ಥೋರುಸೆ ಒತ್ತಾಯಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ ತೆರದಾಳೆ ಮಾತನಾಡಿ ಶಾಸಕ ಶ್ರೀಮಂತ ಪಾಟೀಲ ಸೇರಿದಂತೆ 17 ಜನರು ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ವಲಸೆ ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣಿಕರ್ತರಾಗಿದ್ದರು.

ಆ ಸಂದರ್ಭದಲ್ಲಿ ಎಲ್ಲರಿಗೂ ಸಚಿವ ಸ್ಥಾನ ನೀಡುತ್ತೇವೆಂದು ಭರವಸೆ ನೀಡಲಾಗಿತ್ತು. ಆದರೆ ಈಗ ಆ ಭರವಸೆ ಹುಸಿಯಾಗಿದ್ದು ಬಿಜೆಪಿ ರಾಷ್ಟ್ರ ಹಾಗೂ ರಾಜ್ಯದ ವರಿಷ್ಟರು ತಕ್ಷಣವೇ ಅವರನ್ನು ಮಂತ್ರಿ ಮಂಡಳಕ್ಕೆ ಸೇರ್ಪಡಿಸಿಕೊಳ್ಳಬೆಕೇಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ವೇಳೆ ಮುಖಂಡರಾದ ಮದನ ದೇಶಿಂಗೆ, ಬಸವರಾಜ ಸಾಂಗಾವೆ, ವಿಜಯ ಅಸೂದೆ, ಸುಭಾಷ ಖುರಾಡೆ, ವಿಜಯ ಥೋರುಸೆ, ಪ್ರತಾಪ ಜತ್ರಾಟ,ಸಂಜು ವಾಘಮೋಡೆ, ಸುಜಯ ಫರಾಕಟ್ಟೆ ಸೇರಿದಂತೆ ಅನೇಕರು ಇದ್ದರು.

ಉಪ ತಹಸೀಲ್ದಾರ ಅಣ್ಣಾಸಾಬ ಕೋರಿಯವರಿಗೆ ಮನವಿ ಪತ್ರ ಸಲ್ಲಿಸಿದರು. ಕಾಗವಾಡ ಪಿಎಸ್‍ಐ ಝಾಹೀದ ಮೋಕಾಶಿ ಬಂದೋಬಸ್ತ ಏರ್ಪಡಿಸಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');