ಹಾಡು ಹಗಲೇ ಮನೆಗಳ್ಳತನ : ನಗದು, ಚಿನ್ನಾಭರಣ ಕದ್ದೊಯ್ದ ಖದೀಮರು

0
🌐 Belgaum News :

ಬೀದರ್:  ಮನೆಯಲ್ಲಿ ಯಾರು ಇಲ್ಲದ ವೇಳೆ ಖದೀಮರು ಚಿನ್ನಾಭರಣ , ನಗದು ದೋಚಿ  ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.

ಜಿಲ್ಲೆಯ ಹುಲಸೂರು ತಾಲೂಕಿನ ಬೆಲೂರು ಗ್ರಾಮದ ಬಸವರಾಜ ಹರಗೆ ಎಂಬುವವರ ಅವರ ಮನೆ   ಹಾಡು ಹಗಲೆ ಕಳ್ಳತನ ಮಾಡಲಾಗಿದೆ. ಕುಟುಂಬಸ್ಥರು ಸಂಬಂಧಿಕರ ಊರಿಗೆ ತೆರಳುವುದನ್ನು ಸೂಕ್ಷ್ಮವಾಗಿ ಗಮನಿಸಿದ ಕಳ್ಳರು, ಮನೆ ಬಾಗಿಲನ್ನು ಲಾಕ್ ಮಾಡಿದ ಕೆಲವೇ ಗಂಟೆಗಳಲ್ಲಿ  ಬಾಗಿಲು ಮುರಿದು ಒಳ ನುಗ್ಗಿ ಚಿನ್ನಾಭರಣ , ನಗದು ದೋಚಿದಾರೆ. ಸಾಲದಕ್ಕೆ ಮನೆಯಲ್ಲಿನ ಅಡುಗೆ ಸಾಮಗ್ರಿಗಳನ್ನು ಚೆಲ್ಲಾ-ಪಿಲ್ಲಿ ಮಾಡಿ, ಚೆನ್ನಾಗಿರುವ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ.

10 ಸಾರವಿ ರೂ. ನಗದು, 11  ಗ್ರಾಂ ಚಿನ್ನಾಭರಣ ಕಳ್ಳವು ಮಾಡಿದ್ದಾರೆ ಎಂದು ಕುಟುಂಬಸ್ಥರು ದೂರಿನಲ್ಲಿ ದಾಖಲಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪಿ.ಎಸ್.ಐ. ಗೌತಮ್ ಅವರು ಜನರಲ್ಲಿ ಜಾಗ್ರತೆಯಿಂದ ಇರಲು ಮನವಿ ಮಾಡಿದ್ಧಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');