ಚಿಕ್ಕೋಡಿ : ಜೀವ ಪಣಕ್ಕಿಟ್ಟು ಮೊಸಳೆಯನ್ನು ಸೆರೆ ಹಿಡಿದ ಇಂಗಳಿ ಗ್ರಾಮಸ್ಥರು

0
🌐 Belgaum News :

ಚಿಕ್ಕೋಡಿ : ತಾಲ್ಲೂಕಿನ ಇಂಗಳಿ ಗ್ರಾಮದ  ಕೃಷ್ಣಾ ನದಿ ತೀರದಲ್ಲಿ ಪತ್ತೆಯಾಗಿದ್ದ ಮೊಸಳೆಯನ್ನು  ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಕೃಷ್ಣಾ ನದಿಯ ಮಹಾಪ್ರವಾಹ ಇಳಿಮುಖವಾಗುತ್ತಿದ್ದಂತಯೇ, ಮೊಸಳೆ ಇಂಗಳಿ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಈ  ಮೊಸಳೆಯು ಇಂಗಳಿ- ಮಾಂಜರಿ ಗ್ರಾಮದ ನದಿ ತೀರದಲ್ಲಿ ಗುರುವಾರ ರಾತ್ರಿ 10 ಗಂಟೆಗೆ ಪತ್ತೆಯಾಗಿತ್ತು.

ಬಳಿಕ ಇಂಗಳಿ ಗ್ರಾಮಸ್ಥರು, ಮೊಸಳೆಯನ್ನು ಹಿಡಿಯಲು ಮುಂದಾಗಿದ್ದಾರೆ. ಗ್ರಾ ಪಂ ಮಾಜಿ ಸದಸ್ಯ ಸಂಜಯ ಕುಡಚೆ ಸೇರಿ 10 ಕ್ಕೂ ಹೆಚ್ಚು ಯುವಕರು ರಾತ್ರಿ 3 ಗಂಟೆಯವರೆಗೆ ಹರಸಾಹಸ ಪಟ್ಟು ಮೊಸಳೆಯನ್ನು  ಹಿಡಿಯುವುಲ್ಲಿ ಯಶಸ್ವಿಯಾಗಿದ್ದಾರೆ.

ಹಗ್ಗಗಳಿಂದ ಕಟ್ಟಿಹಾಕಿ ಮೊಸಳೆಯನ್ನು ಟ್ರ್ಯಾಕ್ಟರ್ ನಲ್ಲಿ ತಂದು ಚಿಕ್ಕೋಡಿ ಅರಣ್ಯಧಿಕಾರಿಗಳಿಗೆ ಒಪ್ಪಿಸಿದರು. ಚಿಕ್ಕೋಡಿ ಉಪವಲಯ ಅರಣ್ಯಾಧಿಕಾರಿ ಶ್ರಿಶೈಲ್ ಬಾನಸೆ ಮಾತನಾಡಿ, ಇಂಗಳಿ ಗ್ರಾಮಸ್ಥರು ಜೀವಂತವಾದ ಮೊಸಳೆಯನ್ನು ಹಿಡಿದು ಸಾಹಸವನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈ ಮೊಸಳೆಯನ್ನು ನಾವು ನಮ್ಮ ಇಲಾಖೆಗೆ ತೆಗೆದುಕೊಂಡು ಹೋಗಿ ಪ್ರಾಣಿ ಸಂಗ್ರಹಾಲಯಕ್ಕೆ  ಒಪ್ಪಿಸಲಾಗುವುದು ಎಂದರು.

ಗ್ರಾ. ಪಂ.ಮಾಜಿ ಸದಸ್ಯ  ಸಂಜಯ ಕುಡಚೆ, ಸಚಿನ ಘಾಟಕೆ,ರಾಜು ಜಾಧವ,ಶ್ರೀಕಾಂತ್ ಔಗಲೆ,ಕೈಲಾಸ ಮಗದುಮ್ಮ, ಶಶಿಕಾಂತ ಜಾಧವ, ಅಣ್ಣಾಸಾಹೇಬ ಘಾಟಗೆ,ಅವದೂತ ಜಾಧವ,ಪಿಂಟು ಚೌಗಲಾ,ಸಂತೋಷ ಚೌಗಲೆ,ಪಂಕಜ ಉಪಾಧ್ಯೆ ಉಪಸ್ಥಿತರಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');